ಲಂಡನ್: ಜಾಗತಿಕ ಶಿಕ್ಷಕರ ಪ್ರಶಸ್ತಿಗೆ ಸ್ಫೂರ್ತಿಯಾಗಿದ್ದ ಕೇರಳದ ಶಿಕ್ಷಕಿ ಮರಿಯಮ್ಮ ವರ್ಕೆ(89) ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ, ಯುಎಇ ಮೂಲದ ಉದ್ಯಮಿ ಸನ್ನೀ ವರ್ಕೆ ಮಾಹಿತಿ ನೀಡಿದ್ದಾರೆ.
ಕೇರಳದಿಂದ ಯುಎಇಗೆ ವಲಸೆ ಹೋಗಿದ್ದ ಮರಿಯಮ್ಮ ವರ್ಕೆ ಅವರು ತಮ್ಮ ಪತಿ ಕೆ.ಎಸ್. ವರ್ಕೆ ಅವರೊಂದಿಗೆ ಸೇರಿ ಯುಎಇಯ ಶಿಕ್ಷಣ ವ್ಯವಸ್ಥೆಯಲ್ಲೇ ಅಮೂಲಾಗ್ರ ಬದಲಾವಣೆ ತಂದಿದ್ದರು. ಸ್ಥಳೀಯ ಅರಬ್ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಿದ್ದ ಈ ದಂಪತಿಯು ದುಬೈನ ರಾಜಮನೆತನದ ಕುಡಿಗಳಿಗೂ ಪಾಠ ಮಾಡಿದ್ದರು.
ದುಬೈನಲ್ಲಿ 1968ರಲ್ಲಿ ವರ್ಕೆ ಕುಟುಂಬವು “ಅವರ್ ಓನ್ ಇಂಗ್ಲಿಷ್ ಹೈಸ್ಕೂಲ್’ ಎಂಬ ಶಾಲೆ ಆರಂಭಿಸಿತು. ಶಿಕ್ಷಕ ವೃತ್ತಿ ಬಗ್ಗೆ ತಾಯಿ ಮರಿಯಮ್ಮ ಅವರಿಗಿದ್ದ ಒಲುಮೆಯ ಗೌರವಾರ್ಥ ಸನ್ನಿ ವರ್ಕೆ 1 ದಶ ಲಕ್ಷ ಡಾಲರ್ ಮೊತ್ತದ “ಜಾಗತಿಕ ಶಿಕ್ಷಕ ಪ್ರಶಸ್ತಿ’ಯನ್ನು ಸ್ಥಾಪಿಸಿದ್ದರು.
ಇದನ್ನೂ ಓದಿ :10 ಮತ್ತು 12ನೇ ತರಗತಿ ಪರೀಕ್ಷೆ ಸುತ್ತೋಲೆ ಗೊಂದಲಕ್ಕೆ ಸಿಬಿಎಸ್‌ಇ ತೆರೆ