ಮಹಾಲಿಂಗಪುರ: ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸಿ ಮಕ್ಕಳಿಗೆ ಭಾರತೀಯ ಭವ್ಯ ಪರಂಪರೆಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪತ್ರಕರ್ತ ಜಯರಾಮಶೆಟ್ಟಿ ಹೇಳಿದರು. ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಸಂಕ್ರಮಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಕರ್ತರಾದ ಚಂದ್ರಶೇಖರ ಮೋರೆ, ನಾರನಗೌಡ ಉತ್ತಂಗಿ, ಮಹೇಶ ಮನ್ನಯ್ಯನವರಮಠ ಮಾತನಾಡಿ ಸೂರ್ಯನು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕೆನೆಡೆ ಪ್ರಯಾಣ ಮುಗಿಸಿ ಮಕರ ರಾಶಿಗೆ ಪ್ರಯಾಣಿಸುವ ದಿನದ ನಿಮಿತ್ತ ಸಂಕ್ರಮಣ ಆಚರಿಸಲಾಗುತ್ತಿದೆ ಎಂದರು. ಶಾಲೆಯ ಅಂಗಳವನ್ನು ರಂಗೋಲಿ, ಮಣ್ಣಿನ ಮಡಿಕೆ, ಕಬ್ಬುಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿನಿಯರು ಸಂಕ್ರಮಣ ನೃತ್ಯ ಮಾಡಿದರು. ಮಕ್ಕಳು ಮತ್ತು ಶಿಕ್ಷಕರು ಸಂಕ್ರಮಣ ಊಟದ ವಿವಿಧ ರೀತಿಯ ಖಾದ್ಯಗಳನ್ನು ಸವಿದರು.
ಕಾನಿಪ ಅಧ್ಯಕ್ಷ ಮಹೇಶ ಆರಿ, ಪತ್ರಕರ್ತರಾದ ಎಸ್.ಎಸ್. ಈಶ್ವರಪ್ಪಗೋಳ, ಮೀರಾ ತಟಗಾರ ಭಾಗವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ನಿರ್ದೇಶಕರಾದ ಈಶ್ವರ ಮುರಗೋಡ, ರಾಜು ಘಟ್ಟೆಪ್ಪನವರ, ಮುಖ್ಯಗುರು ಎಸ್. ಎಸ್. ಕೌಜಲಗಿ, ಆಯ್.ಎಂ. ಬಡಿಗೇರ, ಎಸ್.ಎನ್. ಹೊಸಕೇರಿ, ಎಸ್.ಪಿ. ಸುತಾರ, ಯು.ಜಿ. ಬಾಗಲಕೋಟ, ಆರ್.ಬಿ. ಜಾಡಗೌಡ, ಎಮ್.ಎಸ್. ಅಂಗಡಿ, ಎಸ್.ಎಂ. ಮನ್ನಯ್ಯನವರಮಠ ಇದ್ದರು.