Advertisement

ಪಿಂಕ್‌ ನೋಟ್‌ ತೆರೆಗೆ ಬರಲು ತಯಾರಿ

05:01 PM Nov 01, 2022 | Team Udayavani |

“ಅಮ್ಮ ಎಂಟರ್‌ಪ್ರೈಸಸ್‌’ ಬ್ಯಾನರ್‌ನಲ್ಲಿ ಹೆಚ್‌. ಆನಂದಪ್ಪ ನಿರ್ಮಿಸುತ್ತಿರುವ “ಪಿಂಕ್‌ ನೋಟ್‌’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣ ಗೊಂಡಿದ್ದು ಸದ್ಯ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.

Advertisement

ಭಾವನಾ ಮೆನನ್‌, ಮುನಿ, ಶ್ರೀನಿವಾಸ ಪ್ರಭು, ಪದ್ಮಜಾ ರಾವ್‌, ನಿಶ್ವಿ‌ಕಾಗೌಡ, ಸಿಂಚನಾ ಪೂಜಾರಿ, ಗಿರಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಪಿಂಕ್‌ ನೋಟ್‌’ ಸಿನಿಮಾಕ್ಕೆ ರಕ್ಷಣ್‌ (ರುದ್ರೇಶ್‌) ಕಥೆ, ಚಿತ್ರಕಥೆ ಬರೆದು ನಿರ್ದೇ ಶನ ಮಾಡುತ್ತಿದ್ದಾರೆ.

ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣ, ಕೆ ಎಂ ಪ್ರಕಾಶ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯಿದ್ದು, ಡಾ. ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯವಿದೆ. ಬೆಂಗಳೂರು, ಉಡುಪಿ, ಮತ್ತು ದುಬೈನಲ್ಲಿ “ಪಿಂಕ್‌ ನೋಟ್‌’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next