Advertisement
ಇಂಗ್ಲೆಂಡ್ ರೋರಿ ಬರ್ನ್ಸ್ (4) ಮತ್ತು ಹಸೀಬ್ ಹಮೀದ್ (6) ಅವರನ್ನು ಅಗ್ಗಕ್ಕೆ ಕಳೆದುಕೊಂಡಿದ್ದು, ಶನಿವಾರದ ಆಟದಲ್ಲಿ ಅಗ್ನಿಪರೀಕ್ಷೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಭಾರೀ ಮಿಂಚು ಗುಡುಗಿನಿಂದಾಗಿ ದ್ವಿತೀಯ ದಿನದ ಆಟವನ್ನು ಬಹಳ ಬೇಗನೇ ಕೊನೆಗೊಳಿಸಲಾಯಿತು.
95 ರನ್ ಮಾಡಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದ ಮಾರ್ನಸ್ ಲುಬುಶೇನ್ ತಮ್ಮ 6ನೇ ಟೆಸ್ಟ್ ಶತಕವನ್ನು ಪೂರ್ತಿಗೊಳಿಸುವಲ್ಲಿ ಯಶಸ್ವಿಯಾದರು. ಆದರೆ ನಾಯಕ ಸ್ಮಿತ್ ಕೇವಲ 7 ರನ್ನಿನಿಂದ ಈ ಅವಕಾಶವನ್ನು ಕಳೆದುಕೊಂಡರು. ಮೊದಲ ದಿನ ವಾರ್ನರ್ ಕೂಡ ಶತಕ ತಪ್ಪಿಸಿಕೊಂಡಿದ್ದರು. ಲಬುಶೇನ್ ಶತಕ ಪೂರೈಸಿದ ಬಳಿಕ ಹೆಚ್ಚು ಹೊತ್ತು ಉಳಿಯಲಿಲ್ಲ. 103 ರನ್ ಮಾಡಿ ರಾಬಿನ್ಸನ್‌ಗೆ ಲೆಗ್ ಬಿಫೋರ್ ಆದರು. ಇದಕ್ಕಾಗಿ ಎದುರಿಸಿದ್ದು ಬರೋಬ್ಬರಿ 305 ಎಸೆತ, ಹೊಡೆದದ್ದು 8 ಬೌಂಡರಿ.
Related Articles
Advertisement
ಸ್ಮಿತ್ ಬಹಳ ಕಾಲದ ಬಳಿಕ ದೊಡ್ಡ ಇನ್ನಿಂಗ್ಸ್ ಒಂದನ್ನು ಕಟ್ಟಿದರು. ಇನ್ನೇನು 28ನೇ ಶತಕ ಒಲಿಯಲಿದೆ ಎನ್ನುವಾಗಲೇ ಆ್ಯಂಡರ್ಸನ್ ಎಲ್‌ಬಿ ಬಲೆಗೆ ಬೀಳಿಸಿದರು. 201 ಎಸೆತಗಳ ಈ ಆಟದಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಕಳೆದ ಪಂದ್ಯದ ಶತಕವೀರ ಹೆಡ್ 18, ಗ್ರೀನ್ ಕೇವಲ 2 ರನ್ ಮಾಡಿ ಔಟಾದರು. ಕೀಪರ್ ಅಲೆಕ್ಸ್ ಕ್ಯಾರಿ 51, ಸ್ಟಾರ್ಕ್ ಔಟಾಗದೆ 39. ನೆಸೆರ್ 35 ರನ್ ಬಾರಿಸಿ ಆಸೀಸ್ ಸರದಿಯನ್ನು ವಿಸ್ತರಿಸಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-9 ವಿಕೆಟಿಗೆ 473 ಡಿಕ್ಲೇರ್ (ಲಬುಶೇನ್ 103, ವಾರ್ನರ್ 95, ಸ್ಮಿತ್ 93, ಕ್ಯಾರಿ 51, ಸ್ಟೋಕ್ಸ್ 113ಕ್ಕೆ 3, ಆ್ಯಂಡರ್ಸನ್ 58ಕ್ಕೆ 2). ಇಂಗ್ಲೆಂಡ್-2 ವಿಕೆಟಿಗೆ 17.