Advertisement

ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ “ಪಿಂಗಾರ’ಪ್ರದರ್ಶನ

11:10 AM Feb 27, 2020 | Lakshmi GovindaRaj |

ಅವಿನಾಶ್‌ ಯು. ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ತುಳು ಚಿತ್ರ “ಪಿಂಗಾರ’ 2020ನೇ ಸಾಲಿನ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ, ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ಸ್ಪರ್ಧೆ ವಿಭಾಗ ಎರಡೂ ವಿಭಾಗಗಳಲ್ಲಿ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ ತುಳು ಚಿತ್ರವೊಂದು ಈ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದೆ.

Advertisement

ಕರ್ನಾಟಕದ ಕರಾವಳಿಯ ಭೂತಾರಾಧನೆಯ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನೀಮಾ ರೇ, ಶರಣ್‌ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರಮೋಹನ್‌, ಸುನಿಲ್‌ ನೆಲ್ಲಿಗುಡ್ಡೆ, ಪ್ರಶಾಂತ್‌ ಸಿ.ಕೆ ಮೊದಲಾದ ತುಳು ಚಿತ್ರರಂಗದ ಹಾಗು ರಂಗಭೂಮಿ ಹಿನ್ನಲೆಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತನಿಯ ಎಂಬ ದಲಿತ ಜಾತಿಯವನ ಮೈಮೇಲೆ ಭೂತದ ದರ್ಶನ ಬಂದು, ನುಡಿಯುವ ಒಂದು ಮಾತಿನಿಂದ ತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರು ಜನರ ಜೀವನದಲ್ಲಿ ಹೇಗೆ ಹೊಸ ತಿರುವು ಸೃಷ್ಟಿಯಾಗುತ್ತದೆ ಎಂಬ ಕಥಾ ವಸ್ತುವನ್ನು ಇಟ್ಟುಕೊಂಡು, ಮಾಡಲಾಗಿರುವ ಚಿತ್ರದಲ್ಲಿ ಮೇಲು-ಕೀಳು ಜಾತಿ ಪದ್ಧತಿ, ಮನುಷ್ಯನ ಅಹಂ ಹಾಗು ಅದರಿಂದ ಜರುಗುವ ಅನ್ಯಾಯಕ್ಕೆ ಪ್ರಕೃತಿ ಹೇಗೆ ಉತ್ತರ ಕೊಡುತ್ತದೆ ಎಂಬುದನ್ನು ಸ್ವಾರಸ್ಯಕರವಾಗಿ ಹೇಳಲಾಗಿದೆ.

“ಪಿಂಗಾರ’ ಚಿತ್ರಕ್ಕೆ ಆರ್‌. ಪ್ರೀತಂ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿ. ಪವನ್‌ ಕುಮಾರ್‌ ಛಾಯಗ್ರಹಣ, ಗಣೇಶ್‌ ನೀರ್ಚಲ್‌ ಹಾಗು ಶೇಷಾಚಲ ಕುಲಕರ್ಣಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಮೈಮ್‌ ರಾಮ್‌ ದಾಸ್‌, ಶೀನಾ ನಾಡೋಲಿ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next