Advertisement

ಭಾಷಣದ ವಿಡಿಯೋ; ಮಂಗಳೂರಿನಲ್ಲಿ RSS ವಿರುದ್ಧ ಪಿಣರಾಯಿ ಕಟು ಟೀಕೆ

05:05 PM Feb 25, 2017 | Sharanya Alva |

ಮಂಗಳೂರು: ಸ್ವಾತಂತ್ರ್ಯ ಹೋರಾಟದ ವೇಳೆ ಆರ್ಎಸ್ಎಸ್ ನಡೆ ಸರಿ ಇರಲಿಲ್ಲವಾಗಿತ್ತು. ಅಂದು ಬ್ರಿಟಿಷರು ಭಾರತ ಬಿಟ್ಟು ತೊಲಗಿ ಎಂದು ಆರ್ ಎಸ್ಎಸ್ ಹೇಳಿರಲಿಲ್ಲ. ಹೀಗೆ ದೇಶಕ್ಕೆ ಮೋಸ ಮಾಡಿದ್ದ ಆರ್ ಎಸ್ಎಸ್ ಇಡೀ ದೇಶದ ಜನತೆ ಒಂದಾಗಿರಬೇಕೆಂದು ಬಯಸಲ್ಲ. ಭಿನ್ನತೆ ಇರಬೇಕೆಂದು ಆರ್ಎಸ್ಎಸ್ ಬಯಸುತ್ತೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.

Advertisement

ತೀವ್ರ ವಿವಾದ, ಹಿಂದೂಪರ ಸಂಘಟನೆಗಳ ಪ್ರತಿಭಟನೆ, ಬಂದ್ ನಡುವೆಯೇ ಶನಿವಾರ ಮಂಗಳೂರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮಿಸಿದ್ದರು. 

ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಬಳಿಕ, ನಗರದ ನೆಹರು ಮೈದಾನದಲ್ಲಿ ಸಿಪಿಎಂ ಆಯೋಜಿಸಿದ್ದ ಕರಾವಳಿ ಸೌಹಾರ್ದ ಸಮಾವೇಶದಲ್ಲಿ ಭಾಷಣ ಮಾಡಿ ಆರ್ಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next