ಪುಣೆ: ಪುಣೆಯ ಪಿಂಪ್ರಿ ಚಿಂಚ್ವಾಡ್ ನಗರದ ದಕ್ಷಿಣ ಭಾರತೀಯರ ಸಂಘಟನೆಯಾದ ಸೌತ್ ವೆಲ್ಫೆàರ್ ಅಸೋಸಿಯೇಷನ್ ಪಿಂಪ್ರಿ-ಚಿಂಚಾÌಡ್ ಇದರ ಎರಡನೇ ವಾರ್ಷಿಕೋತ್ಸವ ಸಂಭ್ರಮವು ಮಾ. 24ರಂದು ಎಂಐಡಿಸಿ ಬೋಸರಿ ಗಣೇಶ್ ನಗರದಲ್ಲಿರುವ ಕ್ವಾಲಿಟಿ ಸರ್ಕಲ್ ಹಾಲ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಅಸೋಸಿಯೇಶನ್‌ನ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅಗಮಿಸಿದ್ದರು. ಈ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪಿಂಪ್ರಿ-ಚಿಂಚಾÌಡ್ ಸೌತ್ ವೆಲ್ಫೆàರ್ ಅಸೋಸಿಯೇಶನ್ ಇದರ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ರಾಕೇಶ್ ನಾಯರ್, ಪಿಂಪ್ರಿ-ಚಿಂಚಾÌಡ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಲಾಶ್ ಮಡಗೆರಿ, ನಗರ ಸೇವಕ ಬಾಬು ನಾಯರ್, ಅಸೋಸಿಯೇಶನ್‌ನ ಕಾರ್ಯದರ್ಶಿ ಸುನಿಲ್ ಗೋಪಿನಾಥ್, ಕೋಶಾಧಿಕಾರಿ ಬಾಲಚಂದ್ರ ಶೆಟ್ಟಿ, ಕಾರ್ತಿಕ್ ಕೃಷ್ಣನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪರಿಸರದ ದಕ್ಷಿಣ ಭಾರತಿಯಯರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಮಹಿಳೆಯರಾದ ಸಮಾಜ ಸೇವಕಿ ನೂತನ್ ಸುವರ್ಣ, ವರ್ಷಾ ಅನಂತ ರಾಮನ್, ಜಯಶ್ರೀ ನಾಗರಾಜನ್, ನಿರ್ಮಲಾ ಕೃಷ್ಣ ಕುಮಾರ್, ವೈದೇಹಿ ರಾಜಾರಾಂ ಹಾಗೂ ಐವರು ಪುರುಷರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಗುಲಾಬ್ ಗೋಪಿನಾಥ್, ಸಂತ ಸಾಹಿತಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಸ್ಥಾಪಕ ಶಿವಲಿಂಗ ಡವಲೇಶ್ವರ್, ಅರ್ . ಎಸ್. ಕುಮಾರ್, ಪಿ. ಎನ್. ಕೆ. ನಾಯರ್ ಅವರಿಗೆ ಪಂಚರತ್ನ ಪ್ರಶಸ್ತಿಯನ್ನು ಸುಬ್ರಹ್ಮಣ್ಯನ್ ಸ್ವಾಮಿ ಹಾಗೂ ಇತರ ಪದಾಧಿಕಾರಿಗಳು ಪ್ರದಾನಿಸಿ ಗೌರವಿಸಿದರು.
ಸೌತ್ ವೆಲ್ಫೆàರ್ ಅಸೋಸಿಯೇಶನ್‌ನ ಪ್ರಮುಖ ಪದಾಧಿಕಾರಿಗಳಾದ ರಾಕೇಶ್ ಶೆಟ್ಟಿ, ಪ್ರಸಾದ್ ನಾಯರ್, ಅರ್. ಪ್ರಭಾಕರನ್, ಗಣೇಶ್ ಅಂಚನ್, ವೇಣು ಅಂಬಲಪುಳ, ಅಭಿಲಾಷ ಸವಿಧಾನ್, ದೀಪಕ್ ನಾಯರ್, ಅವಿನಾಶ್ ಹೊಸಮನಿ, ರೋಶಿತ್ ರವಿಂದ್ರ ಮತ್ತು ಸದಸ್ಯರಾದ ದಿಲೀಪ್ ನಾಯರ್, ರಾಜೇಶ್ ವಲ್ಸನ್, ಸತ್ಯನಾಥನ್ ನಂಬಿಯಾರ್, ಜಯನಂದ ಶೆಟ್ಟಿ, ಸತೀಶ್ ಐಯ್ಯರ್, ಅಭಿನಂದ, ಶಶಿ ನಂಬಿಯಾರ್, ಮುರ್ಗೆಶ್ ಗಿರಿಸಾಗರ್, ಮನು ರಾಜನ್, ಸಂತೋಷ ಆಯಾರ್ಪುಲ್ಲಿ, ಪ್ರಜೀಶ್ ಪದ್ಮನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶ್ರುತಿ ಶಶಿಧರನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ