ಮಿಯಾಮಿ: ಮಿಯಾಮಿಯಿಂದ ಚಿಲಿಗೆ ತೆರಳುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ದಿಢೀರಮೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ವಿಮಾನದಲ್ಲಿ 271 ಮಂದಿ ಪ್ರಯಾಣಿಕರಿದ್ದರು.
ಇದನ್ನೂ ಓದಿ:MLA P. Ravikumar Gowda Ganiga: ನೂರು ವರ್ಷ ವಿದ್ಯುತ್ ಸಮಸ್ಯೆ ಬಾರದು
ಲಾಟಾಮ್ ಏರ್ ಲೈನ್ಸ್ ಕಮಾಂಡರ್ ಇವಾನ್ ಆಂಡೌರ್ (56ವರ್ಷ) ಅವರು ಬಾತ್ ರೂಂನಲ್ಲಿ ಹಠಾತ್ತನೆ ಕುಸಿದು ಬಿದ್ದು, ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸಹ ಪೈಲಟ್ ವಿಮಾನವನ್ನು ಪನಾಮಾದಲ್ಲಿ ತುರ್ತು ಲ್ಯಾಂಡ್ ಮಾಡಿರುವುದಾಗಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಲಾಟಾಮ್ ಏರ್ ಲೈನ್ಸ್ ಟೇಕ್ ಆಫ್ ಆಗಿ ಸುಮಾರು ಮೂರು ಗಂಟೆಗಳ ಬಳಿಕ ಸುಸ್ತಾಗುತ್ತಿರುವುದಾಗಿ ಕ್ಯಾಪ್ಟನ್ ಇವಾನ್ ಹೇಳಿದ್ದರು. ಬಳಿಕ ಬಾತ್ ರೂಂಗೆ ತೆರಳಿದ್ದ ವೇಳೆ ಕುಸಿದುಬಿದ್ದಿದ್ದು, ಈ ಸಂದರ್ಭದಲ್ಲಿ ವಿಮಾನದಲ್ಲಿ ತುರ್ತು ಚಿಕಿತ್ಸೆ ನೀಡಲಾಗಿತ್ತಾದರೂ ಅವರು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
ಹಿರಿಯ ಪೈಲಟ್ ಆಗಿದ್ದ ಆಂಡೌರ್ ಅವರು 25 ವರ್ಷಗಳ ಅನುಭವ ಹೊಂದಿದ್ದರು. ಮೆಡಿಕಲ್ ಎಮರ್ಜೆನ್ಸಿಯ ಹಿನ್ನೆಲೆಯಲ್ಲಿ ಎಲ್ ಎ 505 ವಿಮಾನವನ್ನು ಪನಾಮಾದ ಟುಕ್ಯುಮನ್ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತ ಎಂದು ಲಾಟಾಮ್ ಏರ್ ಲೈನ್ಸ್ ಗ್ರೂಪ್ ತಿಳಿಸಿತ್ತು.