ಪಿಲಿಕುಳ ಮೃಗಾಲದಲ್ಲಿರುವ ರಾಣಿ ಹುಲಿ, ಕಾಡುಶ್ವಾನ ‘ದೋಳ್’ , ‘ರಿಯಾ’ ಪಕ್ಷಿ, ‘ಲಟಿಕ್ಯುಲೇಟಿಡ್’ ಹೆಬ್ಬಾವು, ಕಾಳಿಂಗ ಸರ್ಪ ಇವು ಸಂತಾನಾಭಿವೃದ್ದಿಯನ್ನು ನಡೆಸಿದ ಪ್ರಾಣಿಗಳು.
Advertisement
ರಾಣಿ ಹುಲಿ : 10 ವರ್ಷ ಪ್ರಾಯದ ‘ರಾಣಿ’ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಅದು ಈಗ ಬೆಳೆದು ದೊಡ್ಡದಾಗಿವೆ. ಈಗ ಜನಿಸಿದ ಮರಿಗಳು ಆರೋಗ್ಯವಾಗಿದ್ದು ಇನ್ನು 16 ದಿನಗಳಲ್ಲಿ ಕಣ್ಣು ತೆರೆಯಲಿವೆಯಂತೆ.
Related Articles
ಆಂದ್ರ ಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್’ ಇತ್ತೀಚಿಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಇದೆ ‘ದೋಳ್” ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯದಲ್ಲಿರುವ ಇನ್ನೊಂದು ‘ದೋಳ್ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ “ದೋಳ್” ಕಾಡು ಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ.
Advertisement
‘ರಿಯಾ’ ಪಕ್ಷಿಯ ಜನನ:ಉಷ್ಟ್ರಪಕ್ಷೀಯ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನಿಟ್ಟಿದು. ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದ್ದು , ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮರಿಯು ಜನ್ಮ ತಾಳಿದೆ.
ಅಪರೂಪದ ಅಳಿವಿನಂಚಿನಲಿರುವ ‘ರೆಟಿಕ್ಕುಲೇಟೆಡ್’ ಹೆಬ್ಬಾವು ಸುಮಾರು 20 ಮೊಟ್ಟೆಗಳನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ಸಾಲಿನಲ್ಲಿ 17 ಮರಿಗಳಿಗೆ ಜನ್ಮ ನೀಡಿದೆ. ರೆಟಿಕ್ಯುಲೇಟೆಡ್ ಹೆಬ್ಬಾವು ನಿಕೊಬಾರ್‌ನಲ್ಲಿ ಕಾಣಸಿಗುವ ಹಾವುಗಳು. ಕಾಳಿಂಗ ಸರ್ಪ:
ಕೆಲವು ವರ್ಷಗಳ ಹಿಂದೆ ದೇಶದಲ್ಲೇ ಪ್ರಥಮಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಈಗ ಕಾಳಿಂಗ ‘ನಾಗಮಣಿ’ ಯು ಆರು ಮೊಟ್ಟೆಗಳನ್ನು ಇಟ್ಟಿದ್ದು ಅವುಗಳಿಗೆ ಕೃತಕ ಕಾವು ಕೊಡಲಾಗುತ್ತಿವೆ. ಪಿಲಿಕುಳದಲ್ಲಿ ಒಟ್ಟು 19 ಕಾಳಿಂಗ ಸರ್ಪಗಳಿವೆ.