Advertisement
ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ಜರಗಲಿದೆ. ‘ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯವನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕೃತಿಯನ್ನು ಬಲಪಡಿಸುವುದು ಕಾರ್ಯಕ್ರಮದ ಉದ್ದೇಶ’ ಎಂದು ತುಳುನಾಡೋಚ್ಚಯ ಗುರ್ಕಾರ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ವಾಮಂಜೂರಿನಿಂದ ಪಿಲಿಕುಳದವರೆಗೆ ಬೆಳಗ್ಗೆ 10ಕ್ಕೆ ವಿವಿಧ ಸಮುದಾಯದ ಸಂಸ್ಕೃತಿ, ಉಡುಗೆ-ತೊಡುಗೆ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಸ್ತಬ್ಧಚಿತ್ರ, ಗೊಂಬೆಯಾಟ, ಸಿಂಗಾರಿಮೇಳ, ಚೆಂಡೆಮೇಳ, ಪೂಕಾವಡಿ, ಪಂಚವಾದ್ಯಮೇಳ, ನಾನಾ ರಾಜ್ಯಗಳ ಜನಪದ ಪ್ರದರ್ಶನದೊಂದಿಗೆ ತುಳುನಾಡ ಜನಮೈತ್ರಿ ಜನಪದ ಸಿರಿ ಮೆರವಣಿಗೆ ನಡೆಯಲಿದೆ.
Related Articles
Advertisement
ಎಸಳ್‌ದ ತಾಮರೆ..24ರಂದು ದೈವಾರಾಧನೆಯನ್ನು ಪರಿಚಯಿಸುವ ‘ದೈವಾರಾಧಕೆರೆ ಕೂಟ’ ಕಾರ್ಯಕ್ರಮವಿದೆ. ಅನಂತರ ತುಳುಭಾಷಾ ಪ್ರಾದೇಶಿಕ ವೈವಿಧ್ಯಗಳ ಬಗ್ಗೆ ‘ಎಸಳ್‌ದ ತಾಮರೆ’ ವಿಚಾರಗೋಷ್ಠಿಯಿದೆ. ಕುಂದಾಪುರ, ಶಿವಳ್ಳಿ, ಉಡುಪಿ, ಮೂಡಬಿದಿರೆ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಸುಳ್ಯ, ಮಡಿಕೇರಿ, ಮಹಾರಾಷ್ಟ್ರ, ಕಾಸರಗೋಡು ಭಾಗಗಳಲ್ಲಿ ತಾವರೆಯ ಎಸಳಿನಂತೆ ಅರಳಿರುವ ತುಳು ಭಾಷೆಯ ಬಗ್ಗೆ ವಿಚಾರ ವಿಮರ್ಶೆ ನಡೆಯುತ್ತದೆ. 8ನೇ ಪರಿಚ್ಛೇದಕ್ಕೆ ತುಳು: ಅಭಿಪ್ರಾಯ ಅವಲೋಕನ
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ವಿಚಾರಗೋಷ್ಠಿ ಹಾಗೂ ಅಭಿಪ್ರಾಯ ಅವಲೋಕನ ಜರಗಲಿದೆ. ತುಳು ಸಾಹಿತ್ಯ ಐಸಿರಿ, ಪ್ರಾಚೀನ ತುಳುನಾಡ ಪರಂಪರಾಗತ ತುಳುನಾಡ ಕಳರಿ ಕುರಿತು ಪ್ರಾತ್ಯಕ್ಷಿಕೆ, ಪಾಡªನ ಮೇಳ, ತುಳುಲಿಪಿ ಪ್ರಾತ್ಯಕ್ಷಿಕೆ, ಕಲಿಕಾ ಮಾಹಿತಿ ಮುಂತಾದವು ಕಾರ್ಯಕ್ರಮದ ಹೈಲೈಟ್ಸ್. ಎರಡೂ ದಿನಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಸಿರಿವಂತಿಕೆ ಪ್ರದರ್ಶನವೂ ನಡೆಯಲಿದೆ.