Advertisement

ಡಿಸೆಂಬರ್‌ನಲ್ಲಿ  ಪಿಲಿಕುಳ 3ಡಿ ತಾರಾಲಯ ಲೋಕಾರ್ಪಣೆ

06:20 AM Sep 13, 2017 | Team Udayavani |

ಮಂಗಳೂರು: ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಮಟ್ಟದ 3ಡಿ ತಾರಾಲಯದ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ತಾರಾಲಯದ ಗುಮ್ಮಟ ಮತ್ತು ಪ್ರೊಜೆಕ್ಷನ್‌ ಸಿಸ್ಟಂಗಳ ಸರಬರಾಜು ಹಾಗೂ ಅಳವಡಿಕೆಗೆ ಅಂತಾರಾಷ್ಟ್ರೀಯ ಟೆಂಡರ್‌ ಕರೆದು ಅಮೆರಿಕದ ಮೆ| ಇವಾನ್ಸ್‌ ಆ್ಯಂಡ್‌ ಸದರ್‌ಲ್ಯಾಂಡ್‌ ಕಂಪೆನಿಯ ಟೆಂಡರನ್ನು ಅಂತಿಮಗೊಳಿಸಿ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದ್ದು, ಅಕ್ಟೋಬರ್‌ ಅಂತ್ಯಕ್ಕೆ ಉಪಕರಣಗಳ ಅಳವಡಿಕೆ ಪೂರ್ಣಗೊಳ್ಳಲಿದೆ. ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಯೋಜನೆ, ಸಾಂಖೀÂಕ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ ಹೇಳಿದರು. 

Advertisement

ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಾಣವಾಗುತ್ತಿರುವ 3ಡಿ ಪ್ಲಾನಿಟೋರಿಯಂನ ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಪಿಲಿಕುಳದಲ್ಲಿ ನಿರ್ಮಾಣವಾಗುತ್ತಿರುವ 3ಡಿ ತಾರಾಲಯ ಪ್ರಪಂಚದಲ್ಲಿಯೇ 21ನೆ ತಾರಾಲಯವಾಗಿದೆ. ಭಾರತದ ಪ್ರಥಮ 3 ಡಿ ತಾರಾಲಯವೆಂಬ ಹೆಗ್ಗಳಿಕೆಗೆ ಮಂಗಳೂರು ತಾರಾ ಲಯ ಪಾತ್ರವಾಗಲಿದೆ. ಒಟ್ಟು 35.69 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ತಾರಾಲಯದಲ್ಲಿ 180 ಮಂದಿ ಏಕಕಾಲದಲ್ಲಿ ವೀಕ್ಷಿಸಬಹುದಾದ 3ಡಿ ಥಿಯೇಟರ್‌ ವ್ಯವಸ್ಥೆ ಗೊಳಿಸ ಲಾಗಿದೆ. ಇದರಲ್ಲಿ ಖಗೋಳ ಶಾಸ್ತ್ರ, ವ್ಯೋಮ ಶಾಸ್ತ್ರ ಇತ್ಯಾದಿಗಳಿಗೆ ಫಿಲ್ಮ್ ಶೋ ಹಾಗೂ ಪೂರಕ ಚಟುವಟಿಕೆಗಳನ್ನು ಏರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು. 

ಪಿಲಿಕುಳದಲ್ಲಿ  ಮತ್ಸಾ ಲಯ
ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಪಿಲಿಕುಳ ನಿಸರ್ಗಧಾಮದಲ್ಲಿ ಮೀನುಗಾರಿಕೆ ಇಲಾಖೆಯಿಂದ 15 ಕೋಟಿ ರೂ. ವೆಚ್ಚದಲ್ಲಿ ಮತ್ಸಾéಲಯ ನಿರ್ಮಾಣವಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯು ಅರ್ಬನ್‌ ಇಕೋ ಪಾರ್ಕ್‌ ನಿರ್ಮಾಣಕ್ಕೆ 18 ಕೋಟಿ ರೂ. ಮಂಜೂರು ಮಾಡಿದೆ ಎಂದರು. 

ಚತುಷ್ಪಥ ರಸ್ತೆ
ಪಿಲಿಕುಳಕ್ಕೆ ವೀಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿ ಸಲು ವಾಮಂಜೂರು ಜಂಕ್ಷನ್‌ನಿಂದ ಪಿಲಿಕುಳದ ಪ್ರವೇಶ ದ್ವಾರದವರೆಗಿನ ರಸ್ತೆ ಚತುಷ್ಪಥಗೊಳಿಸಲು 495 ಲಕ್ಷ ರೂ.ಗಳ ಅನು ದಾನಕ್ಕೆ ವಿಜ್ಞಾನ, ತಂತ್ರಜ್ಞಾನ ಇಲಾಖಾ ಸಚಿವರು ಮಂಜೂರಾತಿ ಒದಗಿಸಿದ್ದಾರೆ ಎಂದರು. 

Advertisement

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್‌, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌, ಪ್ರಮುಖರಾದ ಟಿ.ಕೆ. ಸುಧೀರ್‌, ನಾಗೇಂದ್ರ ಕುಮಾರ್‌, ರಾಜಶೇಖರ್‌ ಶೆಟ್ಟಿ ಮಡಂತ್ಯಾರ್‌ ಮುಂತಾದವರು ಉಪಸ್ಥಿತರಿದ್ದರು. 

ಪಿಲಿಕುಳ ಅಭಿವೃದ್ಧಿ  ಪ್ರಾಧಿಕಾರ ಶೀಘ್ರ ರಚನೆ
ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮವನ್ನು ಪ್ರಮುಖ ಆಕರ್ಷಣೆ ಹಾಗೂ ಪ್ರವಾಸೋದ್ಯಮ ತಾಣವನ್ನಾಗಿಸುವ ನಿಟ್ಟಿನಲ್ಲಿ ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ಪ್ರಾಧಿಕಾರವನ್ನು ಶೀಘ್ರದಲ್ಲೇ ರಚಿಸಲಾಗುವುದು. ಪ್ರಾಧಿಕಾರ ರಚನೆಗೆ ಸಂಬಂಧಿಸಿ ಸಚಿವ ಸಂಪುಟದಿಂದ ಒಪ್ಪಿಗೆ ಪಡೆದು ವಿಧಾನ ಸಭೆಯಲ್ಲಿ ಮಂಡಿಸಲಾಗುವುದು. ಪ್ರಾಧಿಕಾರ ರಚನೆಯ ಮೂಲಕ ಇದು ಸರ ಕಾರದ ಸಂಸ್ಥೆಯಾಗಿ ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಪಿಲಿಕುಳ ಅಂತಾ ರಾಷ್ಟ್ರೀಯ ತಾಣವಾಗಿ ಗುರುತಿಸಲ್ಪಡಲಿದೆ. ಪಿಲಿಕುಳ ನಿಸರ್ಗಧಾಮಕ್ಕೆ ವೀಕ್ಷಣೆಗೆ ಬರುವವರು ಸಂಪೂರ್ಣ ಪಿಲಿಕುಳವನ್ನು ವಾಹನ ವ್ಯವಸ್ಥೆ ಮೂಲಕ ವೀಕ್ಷಿಸುವ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಸಚಿವ ಎಂ.ಆರ್‌. ಸೀತಾರಾಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next