Advertisement
ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುತ್ತಿರುವುದರಿಂದ ನಗರಕ್ಕೆ ಲಕ್ಷಾಂತರ ಜನರುಆಗಮಿಸುವ ಹಿನ್ನೆಲೆಯಲ್ಲಿ ನಗರ ಸೌಂದರ್ಯಿಕರಣ,ನೈರ್ಮಲ್ಯ ಕಾಪಾಡುವುದು ಮುಖ್ಯವಾಗಿದೆ. ಆದರೆ,ನಗರದಲ್ಲಿ ಹಂದಿ ಹಾವಳಿ ವಿಪರೀತವಾಗಿದ್ದು, ಎಲ್ಲೆಂದರಲ್ಲಿ ಕಾಣಿಸುವ ಹಂದಿಗಳ ಹಿಂಡು ಕೊಚ್ಚೆಯನ್ನು ಇನ್ನಷ್ಟು ವಿಸ್ತಾರಗೊಳಿಸುತ್ತಿವೆ. ಸಮ್ಮೇಳನದೊಳಗೆ ಹಂದಿ ಹಾವಳಿ ತಪ್ಪಿಸದಿದ್ದರೆ ಇಲ್ಲಿಗೆ ಬಂದವರು ಇದು ಏಲಕ್ಕಿ ಕಂಪಿನ ನಾಡೋ ಅಥವಾ ಹಂದಿಗಳ ಬೀಡೋ ಎಂದು ಆಡಿಕೊಳ್ಳುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ನಗರಸಭೆ ನಗರದ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕಿದೆ.
Related Articles
Advertisement
ನಗರಸಭೆ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. 31 ವಾರ್ಡ್‌ಗಳಿದ್ದು, ಕೆಲ ಮುಂದುವರಿದ ವಾರ್ಡ್‌ಗಳಲ್ಲಷ್ಟೇ ಸ್ವಲ್ಪ ಮಟ್ಟಿಗೆ ಕಸ ತ್ಯಾಜ್ಯ ಸಂಗ್ರಹಣೆ ನಡೆಯುತ್ತಿದೆ. ನಿತ್ಯವೂ ಘನ ಮತ್ತು ಹಸಿ ತ್ಯಾಜ್ಯ ಸಂಗ್ರಹಿಸಬೇಕೆಂಬ ನಿಯಮವಿದ್ದರೂ ಕೆಲವು ವಾರ್ಡ್‌ಗಳಲ್ಲಿ ವಾರದಲ್ಲಿ ಒಂದು, ಎರಡು ಬಾರಿ ಮಾತ್ರ ಮನೆ ಮನೆಯಿಂದತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಜನರು ಅಕ್ಕಪಕ್ಕದ ಖಾಲಿನಿವೇಶನಗಳಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಅದಕ್ಕಾಗಿ ತ್ಯಾಜ್ಯ ಸಂಗ್ರಹಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ನಗರಸೌಂದರ್ಯಿಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಹಂದಿ ಮಾಲಿಕರಿಗೆ ನೀಡಿದ್ದ ಗಡುವುಮುಗಿದಿದೆ. ಮತ್ತೂಂದು ಬಾರಿ ಅವರಿಗೆ ಮನವರಿಕೆ ಮಾಡುತ್ತೇವೆ. ಶೀಘ್ರವೇ ನಗರಸಭೆ ಸಾಮಾನ್ಯ ಸಭೆಕರೆದು ಹಂದಿ ಹಿಡಿಯುವ ಕಾರ್ಯಾಚರಣೆ ನಡೆಸುವ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು. ಖಾಲಿ ನಿವೇಶನ ಸ್ವಚ್ಛತೆಗೂ ಕ್ರಮ ಕೈಗೊಳ್ಳಲಾಗುವುದು. -ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷ