Advertisement

ಮಾನವೀಯತೆಯ ವೈದ್ಯ ಜನರಿಗೆ ದೇವರು: ಸಾಣೇಹಳ್ಳಿ ಶ್ರೀ

12:30 PM Jan 26, 2017 | Team Udayavani |

ದಾವಣಗೆರೆ: ಹೃದಯ ವಿಶಾಲತೆ- ಶ್ರೀಮಂತಿಕೆಯಿಂದ ರೋಗಿಗಳಿಗೆ ಸಲಹೆ, ಚಿಕಿತ್ಸೆ ನೀಡುವ ವೈದ್ಯರು ದೇವರಿಗೆ ಸಮಾನವಾಗುತ್ತಾರೆ ಎಂದು ಸಾಣೇಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. 

Advertisement

ತರಳಬಾಳು ಸಭಾಭವನದಲ್ಲಿ ಬುಧವಾರ ಸಂಜೆ ಎನ್‌.ಜಿ. ಪುಟ್ಟಸ್ವಾಮಿ ಮತ್ತು ಸ್ನೇಹ ಬಳಗದಿಂದ ಡಾ| ಎಚ್‌. ಗುರುಪಾದಪ್ಪ, ಡಾ| ಉಪಾಸಿ, ಡಾ| ವಸಂತ್‌ಕುಮಾರ್‌, ಡಾ| ಶ್ರೀನಿವಾಸ್‌, ಡಾ| ಅಲಿ ಅವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೈದ್ಯರು ರೋಗಿಗಳನ್ನು ಪ್ರೀತಿ, ವಿಶ್ವಾಸದಿಂದ ಕಾಣುವಂತೆ ರೋಗಿಗಳು, ಸಾರ್ವಜನಿಕರು ಸಹ ವೈದ್ಯರನ್ನುಅದೇ ರೀತಿ ಕಾಣಬೇಕು ಎಂದರು. ಜನರು ವೈದ್ಯರನ್ನು ದೇವರಂತೆ ಕಾಣುವಂತಾಲು ಹೃದಯ ವಿಶಾಲತೆ, ಮಾನವೀಯ ಕಳಕಳಿಯಿಂದಇರಬೇಕು.

ಹಣ, ಸ್ವಾರ್ಥ, ಸಂಕುಚಿತ ಮನೋಭಾವ ಇದ್ದವರು ಜನರಿಗೆ ದೆವ್ವದಂತೆ ಕಾಣುತ್ತಾರೆ. ಸಮಯ ಯಾರ ಕೈಯಲ್ಲೂ ಇರುವುದಿಲ್ಲ. ಇರಲಿಕ್ಕೆ ಸಾಧ್ಯವೂ ಇಲ್ಲ. ಹಾಗಾಗಿ ಕೊನೆಯ ಉಸಿರುತನಕ ಪ್ರತಿಯೊಬ್ಬರೂ ಸಾರ್ಥಕ ಕೆಲಸದ ಜೀವನ ಸಾಗಿಸಬೇಕು ಎಂದು ತಿಳಿಸಿದರು. 

ಇಂದಿನ ವಾತಾವರಣದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕಾದ ಜಾಗದಲ್ಲಿ ಭೀತಿ, ಹಣದ ವ್ಯಾಮೋಹ ಕಂಡು ಬರುತ್ತಿದೆ. ಇದರಿಂದಾಗಿ ಮನಸ್ಸು ವಿಕಾರವಾಗುತ್ತಿದೆ. ಜಗತ್ತಿನಲ್ಲಿ ಯಾರು ಪ್ರೀತಿಯನ್ನು ಬಂಡವಾಳ ಮಾಡಿಕೊಂಡು ಜೀವನ ನಡೆಸುವರೋ ಅಂಥಹರು ಸದಾ ಸಂತೋಷದಿಂದ ಇರುತ್ತಾರೆ ಎಂದು ತಿಳಿಸಿದರು. 

Advertisement

ಪ್ರಸ್ತುತ ವಾತಾವರಣದಲ್ಲಿ ನಾವೆಲ್ಲರೂ ಮಕ್ಕಳಲ್ಲಿ ಕನ್ನಡ ಸಂಸ್ಕೃತಿಯನ್ನ ಬೆಳೆಸುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು. ಕನ್ನಡ ಸಂಸ್ಕೃತಿ ಎಂಬುದು ಜೀವನದ ದಾರಿದೀಪ ಎಂಬುದನ್ನು ಮರೆಯಬಾರದು. ಕನ್ನಡದ ಜೊತೆಗ ಆಂಗ್ಲ ಭಾಷೆಯನ್ನು ಕಲಿಸಬೇಕು.

ಅಂತೆಯೇ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ ಇತರರು ಇದ್ದರು. ಡಾ| ಎಚ್‌. ಗುರುಪಾದಪ್ಪ, ಡಾ| ಉಪಾಸಿ, ಡಾ| ವಸಂತ್‌ಕುಮಾರ್‌,  ಡಾ| ಶ್ರೀನಿವಾಸ್‌, ಡಾ| ಅಲಿ ಅವರನ್ನು ಅಭಿನಂದಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next