Advertisement

ಯೋಗದಿಂದ ದೈಹಿಕ-ಮಾನಸಿಕ ಆರೋಗ್ಯ: ಶೆಟ್ಟರ

04:40 PM Jun 22, 2021 | Team Udayavani |

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರು ನೃಪತುಂಗ ಬೆಟ್ಟ ಬಳಿಯ ಪಿರಾಮಿಡ್‌ ಧ್ಯಾನಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಭ್ಯಾಸ ನಡೆಸಿದರು.

Advertisement

ಬೆಳಗ್ಗೆ 7 ಗಂಟೆಯಿಂದ 8 ಗಂಟೆವರೆಗೂ ವಿವಿಧ ಯೋಗಾಸನಗಳನ್ನು ಸಚಿವರು ಮಾಡಿದರು. ನಂತರ ಮಾತನಾಡಿ, ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಸಾಧ್ಯ. ನಿತ್ಯ ಯೋಗ ಮಾಡುವವರಿಗೆ ಕೊರೊನಾ ಹೆಚ್ಚಾಗಿ ಬಾಧಿಸುವುದಿಲ್ಲ. ಇದು ನನ್ನ ಸ್ವಂತ ಅನುಭವವೂ ಆಗಿದೆ. ಯೋಗದಲ್ಲಿ ತೊಡಗುವ ಮೂಲಕ ನಮ್ಮ ಆರೋಗ್ಯ ಸದೃಢಗೊಳಿಸಿಕೊಳ್ಳಬಹುದಾಗಿದೆ. ಜತೆಗೆ ಶಿಸ್ತುಬದ್ಧ ಜೀವನಶೈಲಿ ನಮ್ಮದಾಗಲಿದೆ ಎಂದರು.

ಯೋಗ ನಮ್ಮ ಪೂರ್ವಜರ ಮಹತ್ವದ ಕೊಡುಗೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಜೂ. 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಬೇಕೆಂಬ ಮನವಿಗೆ ವಿಶ್ವ ಸಂಸ್ಥೆ ಮನ್ನಣೆ ನೀಡಿದ್ದರಿಂದಾಗಿ ಇಂದು ವಿಶ್ವದ ಅನೇಕ ದೇಶಗಳು ಯೋಗದಲ್ಲಿ ತೊಡಗಿವೆ. ಯೋಗ ದಿನಾಚರಣೆ ಕೈಗೊಳ್ಳುತ್ತಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಯೋಗ ದಿನಾಚರಣೆಯನ್ನು ವರ್ಚುವಲ್‌ ಮೂಲಕ ಬಹುತೇಕ ಕಡೆ ಕೈಗೊಳ್ಳಲಾಗುತ್ತಿದೆ. “ಮನೆಯಲ್ಲಿಯೇ ಇದ್ದು ಯೋಗ ಮಾಡಿ’ ಈ ವರ್ಷದ ಯೋಗ ದಿನಾಚರಣೆ ಘೋಷವಾಕ್ಯವಾಗಿದೆ.

ಯೋಗ ಮತ್ತು ಧ್ಯಾನದ ಮಹತ್ವ ಮನವರಿಕೆಗಾಗಿಯೇ ಈ ಪಿರಾಮಿಡ್‌ ಧ್ಯಾನಮಂದಿರ ನಿರ್ಮಿಸಲಾಗಿದೆ ಎಂದು ಹೇಳಿದರು. ಯೋಗ ಶಿಕ್ಷಕ ಸಂಗಮೇಶ ನಿಂಬರಗಿ ಹಾಗೂ ತಂಡ ಯೋಗಾಸನಗಳ ತರಬೇತಿ ನೀಡಿತು. ಜಿಪಂ ಸಿಇಒ ಡಾ| ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮೀನಾಕ್ಷಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಚನ್ನು ಹೊಸಮನಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next