ಮಣಿಪಾಲ: ಮನುಷ್ಯನ ಸುಸ್ಥಿರ ಮಾನಸಿಕ ಆರೋಗ್ಯಕ್ಕೆ ದೈಹಿಕ ಸದೃಢತೆ ಅತಿ ಮುಖ್ಯವಾಗಿದೆ. ಸಾಮರ್ಥ್ಯ/ ಪ್ರತಿಭೆಯ ಜತೆಗೆ ದೈಹಿಕ ಸದೃಢತೆಯಿದ್ದಾಗ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಹೇಳಿದರು.
ರಾಷ್ಟ್ರೀಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಸಂಘ (ಎನ್‌ಎಪಿಇಎಸ್‌ಎಸ್)ವು ಮಾಹೆ ವಿ.ವಿ.ಯ ಸಹಭಾಗಿತ್ವದಲ್ಲಿ ಕೆಎಂಸಿಯ ಡಾ| ಟಿಎಂಎ ಪೈ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಹೆಯಲ್ಲಿ ಶೈಕ್ಷಣಿಕ ಚಟುವಟಿಕೆಯ ಜತೆಗೆ ಕ್ರೀಡೆಗೂ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ವಿದ್ಯಾರ್ಥಿಗಳ ಸರ್ವತೋ ಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ ವಾಗಿದೆ. ಮಾಹೆಯ ಮರೇನಾ ಒಳಾಂಗಣ ಕ್ರೀಡಾಂ ಗಣ ದಲ್ಲಿ ಎಲ್ಲ ರೀತಿಯ ಕ್ರೀಡೆಗಳಿಗೂ ಅವಕಾಶ ಮಾಡಿ ಕೊಡಲಾಗಿದೆ ಎಂದು ಹೇಳಿದರು.
ಸಹ ಕುಲಪತಿ ಡಾ| ಶರತ್ ಕುಮಾರ್ ರಾವ್ ಮಾತ ನಾಡಿ, ಕ್ರೀಡಾ ವಿಜ್ಞಾನ ಪ್ರಸ್ತುತ ಸಾಕಷ್ಟು ಅಭಿವೃದ್ಧಿ ಯಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವೈಯಕ್ತಿಕ ಕ್ರೀಡೆ ಹಾಗೂ ಗುಂಪು ಕ್ರೀಡೆಗಳು ಸೋಲು ಮತ್ತು ಗೆಲುವಿನ ಸಾಕಷ್ಟು ಪಾಠ ಕಲಿಸುತ್ತದೆ. ಟೀಮ್ ವರ್ಕ್ ಸದಾ ಜಯ ತಂದು ಕೊಡುತ್ತದೆ. ಕ್ರೀಡಾ ವಿಜ್ಞಾನ ದಲ್ಲಿ ಅನ್ವೇಷಣೆ ಹಾಗೂ ಸಂಶೋಧನೆಯೂ ಅಗತ್ಯ ಎಂದು ಹೇಳಿದರು.
ಕುಲಸಚಿವ ಡಾ| ಗಿರಿಧರ್ ಕಿಣಿ ಅವರು ಎನ್‌ಎಪಿ ಇ ಎಸ್‌ಎಸ್ ಸವೆನರ್ ಬಿಡುಗಡೆ ಮಾಡಿ ಶುಭ ಹಾರೈಸಿ ದರು. ಜರ್ಮನಿಯ ಪ್ರಾಧ್ಯಾಪಕ ಪ್ರೊ| ಕ್ಲೂಸ್ ಪೀಟರ್ ಹೆರ್ಮ್, ಎನ್‌ಎಪಿಇಎಸ್‌ಎಸ್ ಚೀಫ್ ಪ್ಯಾಟ್ರನ್ ಚಿನ್ನಪ್ಪ ರೆಡ್ಡಿ, ಮಲೇಷ್ಯಾದ ಸ್ಪೋರ್ಟ್ಸ್ ಸೈನ್ಸ್ ಆ್ಯಂಡ್ ರಿಕ್ರಿಯೇಶನ್ ಯುನಿವರ್ಸಿಟಿ ಟೆಕ್ನಾಲಜಿಯ ಪ್ರೊ| ಒಲೆಸ್ಕಂದ್ರ ಕ್ರಸಿಲ್ಶಚಿಕೊವ್ ಪ್ರಸ್ತುತ ಕ್ರೀಡಾ ವಿಜ್ಞಾನದ ಅಗತ್ಯ ಮತ್ತು ಮಹತ್ವ ತಿಳಿಸಿದರು. ಸಮ್ಮೇಳನದ ಸಂಘಟನ ಕಾರ್ಯದರ್ಶಿ ಡಾ| ದೀಪಕ್ ರಾಮ್ ಬಾಯರಿ ಉಪಸ್ಥಿತರಿದ್ದರು.
ಎನ್‌ಎಪಿಇಎಸ್‌ಎಸ್ ಅಧ್ಯಕ್ಷ ಡಾ| ಪ್ರದೀಪ್ ದೇಶಮುಖ್ ಸ್ವಾಗತಿಸಿ, ಮಾಹೆ ಕ್ರೀಡಾ ಮಂಡಳಿ ಕಾರ್ಯ ದರ್ಶಿ ಡಾ| ವಿನೋದ್ ನಾಯಕ್ ವಂದಿಸಿ, ಎಂಐಸಿ ಪ್ರಾಧ್ಯಾಪಕ ಡಾ| ಪದ್ಮಕುಮಾರ್ ನಿರೂಪಿಸಿದರು.