Advertisement

ಫುಲೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿರಿದಾದುದು:ಶಾಂತಲಿಂಗ ಶ್ರೀ

03:43 PM Jan 08, 2024 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ದಮನಿತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆದು ಕ್ರಾಂತಿಕಾರಿ ಚಳವಳಿ ಮಾಡಿದ ಭಾರತದ ಆಧುನಿಕ ಶಿಕ್ಷಣದ ಮೊದಲ ಅಕ್ಷರದಾತೆ ಸಾವಿತ್ರಿಬಾಯಿ ಫುಲೆ. ಆಗಿನ ಕಾಲದಲ್ಲಿಯೇ ರಾತ್ರಿ ಶಾಲೆಗಳನ್ನು ಆರಂಭಿಸಿ ಸಮಾನ ಶಿಕ್ಷಣದ ಕಲ್ಪನೆ ಕೊಟ್ಟ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಿರಿದಾದುದು ಎಂದು ಶಾಂತಲಿಂಗ ಶ್ರೀ ಹೇಳಿದರು.

Advertisement

ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ತ್ರೀಯರು ಕೂಡಾ ಪುರುಷರಂತೆ ಶಿಕ್ಷಣ ಪಡೆಯಬೇಕೆಂದು 12 ನೇ ಶತಮಾನದ ಬಸವಾದಿ ಶಿವಶರಣರ ಕನಸನ್ನು ನನಸಾಗಿಸಲು
ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಶಾಲೆ, ಶಿಶು ಕೇಂದ್ರ ಸ್ಥಾಪಿಸಿ ಆ ಮೂಲಕ ಮಹಿಳೆಯರ ಮತ್ತು ಮಕ್ಕಳ ಬದುಕಿಗೆ ಭದ್ರವಾದ
ನೆಲೆಕೊಟ್ಟ ದಿಟ್ಟ ಸಾಮಾಜಿಕ ಹೋರಾಟಗಾರ್ತಿ ಫುಲೆಯವರು. ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ಸಹಿತ ಅವರ ಶಿಕ್ಷಣಕ್ಕೆ ರಹದಾರಿಯನ್ನು ಕಲ್ಪಿಸಿದ ಶಿಕ್ಷಣ ಮಾತೆ ಎಂದು ಬಣ್ಣಿಸಿದರು.

ಸ್ನೇಹಜೀವಿ ವಿದ್ಯಾಲಯದ ಮುಖ್ಯಶಿಕ್ಷಕಿ ಮಾಲಾ ಪಾಟೀಲ ಮಾತನಾಡಿ, ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾಗಿ 19ನೇ ಶತಮಾನದಲ್ಲಿ ಬಾಲ್ಯವಿವಾಹ, ಸತಿಸಹಗಮನ ಪದ್ಧತಿಯಂತ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ವೀರ
ಮಹಿಳೆ ಸಾವಿತ್ರಿಬಾಯಿ ಫುಲೆಯವರು. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿರುವುದಕ್ಕೆ ಸಾವಿತ್ರಿಬಾಯಿ
ಹೋರಾಟ ಮುಖ್ಯವಾಗಿದೆ. ಪ್ರತಿಯೊಬ್ಬ ಮಹಿಳೆಯರು ಅಕ್ಷರದಾತೆಯನ್ನು ನೆನೆಯಬೇಕು ಅದು ಎಲ್ಲರ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.

ಸಾವಿತ್ರಿಬಾಯಿ ಫುಲೆಯವರ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ. ಶಿಕ್ಷಕ ಸಮುದಾಯಕ್ಕೆ ಅವರ ಚಿಂತನೆಗಳು,
ವಿಚಾರಧಾರೆಗಳು ಪ್ರೇರಣೆ. ಅವರಂತೆಯೇ ಎಲ್ಲರೂ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು.
ಫುಲೆಯವರ ಜಯಂತಿಯನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಲು ಸರಕಾರ ಘೋಷಣೆ ಮಾಡಬೇಕೆಂದು ಬೈರನಹಟ್ಟಿ ಪೂಜ್ಯ
ಶಾಂತಲಿಂಗ ಶ್ರೀ ಹೇಳಿದರು.

Advertisement

ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಲ್ಮಾ ಎ.ಎಸ್‌. ಹಾಗೂ ಮಾಲಾ ಪಾಟೀಲ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಶರಣಮ್ಮ ತೆಗ್ಗಿನಮನಿ, ರೇಣುಕಾ ಹುಜರತ್ತಿ, ಮೋಹನಕೃಷ್ಣ, ರೇಣಕ್ಕ ನರಸಾಪುರ ಪ್ರಮುಖರು ಉಪಸ್ಥಿತರಿದ್ದರು.ಮಹಾಂತೇಶ ಹಿರೇಮಠ ನಿರೂಪಿಸಿ-ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next