ನವದೆಹಲಿ: ಫೋಟೊಶಾಪ್ (Photoshop) ಪ್ರಬಲ ಇಮೇಜ್ ಎಡಿಟಿಂಗ್ ಸಾಫ್ಟ್ ವೇರ್ ಆಗಿದ್ದು, ಇದು ಬಳಕೆದಾರರಿಗೆ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತದೆ ಎಂಬುದಕ್ಕೆ ಈ ಕಲಾವಿದ ಸಾಕ್ಷಿಯಾಗಿದ್ದಾರೆ. ಫೋಟೊಶಾಪ್ ಕೈಚಳಕದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಪುರುಷನಂತೆ ಚಿತ್ರಿಸಿರುವ ಚಿತ್ರ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ತಪ್ಪಿದ congress ಟಿಕೆಟ್: ಅಭಿಮಾನಿಗಳ ಸಭೆ ಕರೆದ ದತ್ತಾ ಮೇಷ್ಟ್ರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಜೋಸ್ ಅನ್ಟೋನಿಯೊ ಸಾಲಿಬಾ ಎಂಬ ಕಲಾವಿದ ಫೋಟೊಶಾಪ್ ಟೂಲ್ ಗಳನ್ನು ಬಳಸಿ ಪ್ರಿಯಾಂಕಾ ಚೋಪ್ರಾ ಅವರನ್ನು ಪುರುಷನಂತೆ ಚಿತ್ರಿಸಿದ್ದಾರೆ.
ತನ್ನ ಕೈಚಳಕದಲ್ಲಿ ಮೂಡಿಬಂದಿರುವ ಫೋಟೊದ ವಿಡಿಯೋವನ್ನು ಜೋಸ್ ಅವರು ತಮ್ಮ ಇನ್ಸ್ ಟಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿ, “ಪ್ರಿಯಾಂಕಾ ಚೋಪ್ರಾ ಆ್ಯಸ್ ಎ ಮ್ಯಾನ್” ಎಂಬ ತಲೆಬರಹ ನೀಡಿದ್ದಾರೆ.
ವಿಡಿಯೋದಲ್ಲಿ ಕಲಾವಿದ ಜೋಸ್ ಅವರು ನಟಿಯ ಫೋಟೊವನ್ನು ಎಡಿಟ್ ಮಾಡಲು ಆರಂಭಿಸಿದ್ದು, ಮೊದಲು ಆಕೆಯ ಕಣ್ಣುಗಳನ್ನು ಕಿರಿದಾಗಿಸಿದ್ದು, ಹುಬ್ಬುಗಳನ್ನು ಎಡಿಟ್ ಮಾಡಿ, ಮುಖ ಹಾಗೂ ತಲೆಕೂದಲನ್ನು ಪುರುಷನಂತೆ ಚಿತ್ರಿಸಿರುವುದು ದಾಖಲಾಗಿದೆ. ಕೊನೆಗೆ ಕಲಾವಿದ ಜೋಸ್ ಕೈಚಳಕದಲ್ಲಿ ಪ್ರಿಯಾಂಕಾ ಪುರುಷನಾದ ಫೋಟೋ ಹೇಗೆ ಮೂಡಿಬಂದಿದೆ ಎಂಬುದು ಚಿತ್ರದಲ್ಲಿ ಕಾಣಬಹುದಾಗಿದೆ.