Advertisement

ವೃತ್ತಿಪರ ಛಾಯಾಗ್ರಾಹಕರಾಗಲು ಯಾವ ರೀತಿಯ ಫೋಟೋ ತೆಗೆಯಬೇಕು…ಇಲ್ಲಿದೆ ಟಿಪ್ಸ್ !

06:23 PM Sep 08, 2020 | Mithun PG |

ನಾನು ಯಾವ ರೀತಿಯ ಫೋಟೋಗ್ರಫಿಯನ್ನು ಕರಗತ ಮಾಡಿಕೊಳ್ಳಬೇಕು? ಇದು ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳ ಬಯಸುವವರು ಅಲೋಚಿಸುವ ಪರಿ. ಈ ಕ್ಷೇತ್ರ ನಿಜಕ್ಕೂ ಕ್ರಿಯಾತ್ಮಕ ಮತ್ತು ವೈವಿಧ್ಯಮಯವಾದುದು. ಒಂದು ವಸ್ತುವನ್ನು ವಿಭಿನ್ನವಾಗಿ ತಮ್ಮ ಕ್ಯಾಮಾರದಲ್ಲಿ ಸೆರೆಹಿಡಿಯುವ ರೀತಿ ಮತ್ತು ಸಮಯಪ್ರಜ್ಞೆ ಇಲ್ಲಿ ಬಹಳ ಮುಖ್ಯವಾಗುವುದು.

Advertisement

ಹಾಗಾದರೇ ವೃತ್ತಿಜೀವನದಲ್ಲಿ ಯಾವ ರೀತಿಯ ಫೋಟೋಗ್ರಫಿ ಪ್ರಕಾರಗಳನ್ನು ರೂಢಿಸಿಕೊಳ್ಳಬೇಕು ? ಎಂದು ಅಲೋಚಿಸುವವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಪ್ರಮುಖವಾಗಿ 10 ಪ್ರಕಾರಗಳನ್ನು ತಿಳಿಸಲಾಗಿದ್ದು, ಆದರೇ ಇದೇ ಅಂತ್ಯವಲ್ಲ. ಇದರ ಹೊರತಾಗಿ ಕೂಡ ಹಲವಾರು ಛಾಯಾಗ್ರಹಣ ಪ್ರಕಾರಗಳಿವೆ. ಈ ಉದ್ಯಮ ಪ್ರಮುಖವಾಗಿ ನಮ್ಮ ಕೌಶ್ಯಲ್ಯವನ್ನು ಆಧರಿಸಿರುತ್ತದೆ.

ವೃತ್ತಿಪರ ಛಾಯಾಗ್ರಾಹಕರಾಗಲು ಈ 10 ಫೋಟೋಗ್ರಫಿ ವಿಧಾನವನ್ನು ಅನುಸರಿಸಿ.

1) ಮದುವೆ ಸಮಾರಂಭದ ಫೋಟೋಗ್ರಫಿ (Wedding): ಮದುವೆ ಸಮಾರಂಭ ಎಂದಾಕ್ಷಣ ಅಲ್ಲಿ ಫೋಟೋಗ್ರಾಫರ್ ಇರಲೇಬೇಕೆಂಬ ಒಂದು ಅಲಿಖಿತ ನಿಯಮವಿದೆ. ಈ ಶುಭಸಮಾರಂಭದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಫೋಟೋಗಳು ಕ್ಯಾಮಾರದಲ್ಲಿ ಸೆರೆಯಾಗಬೇಕೆಂದು ಬಯಸುತ್ತಾರೆ. ಹೀಗಾಗಿ ಮದುವೆ ಸಮಾರಂಭದಲ್ಲಿ ಛಾಯಾಗ್ರಾಹಕರು ಹೆಚ್ಚಿನ ಆದಾಯ ಗಳಿಸಬಹುದು. ಆದರೇ ಇಲ್ಲಿ ಟೈಮ್ ಸೆನ್ಸ್ ಅನ್ನುವುದು ಅತೀ ಮುಖ್ಯವಾಗುತ್ತದೆ. ಮೊದಲ ಕ್ಲಿಕ್ ನಲ್ಲೇ ಅತ್ಯುತ್ತಮ ಚಿತ್ರ ಸೆರೆಯಿಡಿಯಬೇಕಾದ ಅನಿವಾರ್ಯತೆಯಿರುತ್ತದೆ. ಎರಡನೇ ಅವಕಾಶವೂ ಲಭ್ಯವಾಗುವುದಿಲ್ಲ. ಅತ್ಯುತ್ತಮ ಕಾರ್ಯದಕ್ಷತೆ ತೋರಿದರೇ ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಮೊದಲ ಕಾರ್ಯಕ್ರಮದಲ್ಲೇ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಂಡರೇ ವೃತ್ತಿಜೀವನಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ.

Advertisement

2) ಇವೆಂಟ್ ಫೋಟೋಗ್ರಫಿ: ಕ್ಯಾಮರವೊಂದಿದ್ದರೇ ಇವೆಂಟ್ ಫೋಟೋಗ್ರಫಿಯ ಮೂಲಕ ಸಾಕಷ್ಟು ಆದಾಯ ಗಳಿಸಬಹುದು. ಕಾರ್ಪೋರೇಟ್ ಕಂಪೆನಿಗಳ ಕಾರ್ಯಕ್ರಮಗಳು, ಸಂಗೀತ ನೃತ್ಯ, ಮುಂತಾದವೆಡೆ ತಮ್ಮ ಚಾಕಚಕ್ಯತೆಯನ್ನು ಫೋಟೋಗ್ರಾಫರ್ ತೋರಬೇಕಾಗುತ್ತದೆ. ಕೆಲವೊಂದು ಸಂಸ್ಥೆಗಳು ಪ್ರಚಾರಕ್ಕಾಗಿ ಕೂಡ ಫೋಟೋಗಳನ್ನು ಬಳಸುವುದರಿಂದ ಜಾಗೃತೆ ವಹಿಸಬೆಕಾಗುತ್ತದೆ

3) ಪೋರ್ಟ್ರೇಟ್ ಫೋಟೋಗ್ರಫಿ (Portrait Photography): ವೃತ್ತಿಪರ ಛಾಯಾಗ್ರಹಣದ ಮಹತ್ವವನ್ನು ಅರಿಯಬೇಕಾದರೇ ಮೊದಲು ಈ ಮಾದರಿಯ ಫೋಟೋಶೂಟ್ ನಲ್ಲಿ ನೈಪುಣ್ಯ ಸಾಧಿಸಿರಬೇಕು. ಶಾಲಾ ಫೋಟೋಗಳು, ಕೌಟುಂಬಿಕ ಫೋಟೋಗಳು, ಪಾಸ್ ಪೋರ್ಟ್ ಸೈಜ್ ಮಾದರಿಯ ಫೋಟೋಗಳು, ಕ್ಯಾಂಡಿ್ಡ್ ಮುಂತಾದವು ಈ ಮಾದರಿಯಲ್ಲಿ ಬರುತ್ತವೆ. ಈ ಮಾದರಿಯನ್ನು ಆರಂಭಿಕ ಫೋಟೋಗ್ರಾಫರ್ ಗಳು ಅನುಸರಿಸುವುದು ಸೂಕ್ತ. ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿದಾಗ ಹೆಚ್ಚಿನ ಅವಕಾಶಗಳು ಅರಸಿಕೊಂಡು ಬರುತ್ತದೆ.

4) ಪ್ರೊಡಕ್ಟ್ ಫೋಟೋಗ್ರಫಿ (Product Photograph): ಹೆಸರೇ ಹೇಳುವಂತೆ ಇದೊಂದು ಜಾಹೀರಾತು ಮಾದರಿಯ ಫೋಟೋಗ್ರಫಿ. ಪ್ರತಿಯೊಂದು ವಸ್ತುಗಳಿಗೆ ಮಾರುಕಟ್ಟೆ ಅನಿವಾರ್ಯವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಆ ವಸ್ತುಗಳನ್ನು ಜಗಜ್ಜಾಹೀರು ಮಾಡಬೇಕಾಗುತ್ತದೆ. ಇಲ್ಲಿ ಛಾಯಾಚಿತ್ರಗಾರನ ಕೆಲಸವೇನೆಂದರೇ ಪ್ರತಿಯೊಂದು ಫೋಟೋಗಳು ಆನ್ ಲೈನ್ ಅಥವಾ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವುದರಿಂದ ಬ್ಯಾಕ್ ಗ್ರೌಂಡ್, ಶ್ಯಾಡೋಸ್, ಲೈಟಿಂಗ್, ಮುಂತಾದವನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ತೆಗೆಯಬೇಕಾಗುತ್ತದೆ. ಉದಾ: ಆಭರಣಗಳು, ಕಾರು-ಬೈಕ್. 

ಗಮನಿಸಬೇಕಾದ ಅಂಶವೆಂದರೇ ಈ ತೆರನಾದ ಫೋಟೋಗ್ರಫಿಯಲ್ಲಿ ಕೆಲವೊಮ್ಮೆ ನಟ-ನಟಿಯರು, ಪ್ರಸಿದ್ಧ ವ್ಯಕ್ತಿಗಳು ಭಾಗಿಯಾಗಿರುತ್ತಾರೆ.  ಹೀಗಾಗಿ ಛಾಯಾಗ್ರಾಹಕ ಮೈಯೆಲ್ಲಾ ಕಣ್ಣಾಗಿದ್ದು ಕಾರ್ಯನಿರ್ವಹಿಸಬೇಕಾಗುತ್ತದೆ.

5) ಫೈನ್ ಆರ್ಟ್ ಅಥವಾ ಲಲಿತ ಕಲೆಗಳ ಫೋಟೋ: ಇತರ ಮಾದರಿಯ ಫೋಟೋಗ್ರಫಿಗೆ ಹೋಲಿಸಿದರೇ ಇದಕ್ಕೆ ಯಾವುದೇ ನಿಯಮಗಳಿಲ್ಲ. ಇಲ್ಲಿ ಪೋಟೋಗ್ರಾಫರ್ ಗಳು ಕೂಡ ಕಲೆಯನ್ನು ಪ್ರತಿಬಿಂಬಿಸುತ್ತಾರೆ. ಮಾತ್ರವಲ್ಲದೆ ಇ ತೆರನಾದ ಫೋಟೋಗಳನ್ನು ಆರ್ಟ್ ಶೋ, ಗ್ಯಾಲರಿಗಳಲ್ಲಿ ಪ್ರದರ್ಶನಕ್ಕಿರಿಸಲಾಗುತ್ತದೆ. ಇಲ್ಲಿ ಸೆರೆ ಹಿಡಿಯಲಾದ ಚಿತ್ರಗಳು ಭಾವನಾತ್ಮಕವಾಗಿರಬೇಕು ಮತ್ತು ಜನರೊಂದಿಗೆ ಸಂವಹನ ನಡೆಸುವಂತಿರಬೇಕು.

6) ಫ್ಯಾಶನ್ ಫೋಟೋಗ್ರಫಿ: ಇದೊಂದು ಗ್ಲ್ಯಾಮರಸ್ ಮತ್ತು ಅತೀ ಸವಾಲಿನ ಫೋಟೋಗ್ರಫಿ ಮಾದರಿ. ಇಲ್ಲಿ ಸೆರೆಹಿಡಿಯಲಾದ ಚಿತ್ರಗಳು ಪ್ರಸಿದ್ಧ ಫ್ಯಾಶನ್ ಮ್ಯಾಗಜಿನ್ ಗಳಲ್ಲಿ ಮತ್ತು ಇತರೆಡೆ ಪ್ರಕಟವಾಗುವುದರಿಂದ, ಫೋಟೋಗ್ರಫರ್ ಗೆ ಟ್ರೆಂಡ್ ಹಾಗೂ ಹೊಸತನಗಳ ಅರಿವಿರಬೇಕು. ಇದು ತನ್ನ ವೃತ್ತಿಗೆ ಮಾತ್ರವಲ್ಲದೆ ಮೊಡೆಲ್ ಗಳ ವೃತ್ತಿಗೂ ಅತೀ ಅವಶ್ಯವಾದ ಫೋಟೋಗ್ರಾಪ್ ಎಂಬುದನ್ನು ನೆನಪಿನಲ್ಲಿಡಬೇಕು. ಹೀಗಾಗಿ ಪ್ರತಿಯೊಂದರಲ್ಲೂ ಅಚ್ಚುಕಟ್ಟಾಗಿದ್ದಾರೆ ಮಾತ್ರ ಈ ತೆರೆನಾದ ಛಾಯಾಗ್ರಹಣ ಕ್ಷೇತ್ರವನ್ನು ಪ್ರವೇಶಿಸಿ. ಮಾತ್ರವಲ್ಲದೆ ಇದಕ್ಕೆ ಅತ್ಯುತ್ತಮ ಛಾಯಾಗ್ರಾಹಕರ ತಂಡ ಅವಶ್ಯವಿರುತ್ತದೆ.

7) ವಾಸ್ತುಶಿಲ್ಪ ಛಾಯಾಗ್ರಹಣ (Architectural Photography): ಇಲ್ಲಿ architectural agencies ನೊಂದಿಗೆ ಫ್ರಿಲ್ಯಾನ್ಸ್ ಆಗಿ ಕೂಡ ಕಾರ್ಯನಿರ್ವಹಿಸಬಹುದು. ಛಾಯಾಗ್ರಾಕರು ಪ್ರಮುಖವಾಗಿ ಕಟ್ಟಡದ ಸಾರವನ್ನು ಸೆರೆಯಿಡಿಯಬೇಕಾಗುತ್ತದೆ. ಅಂದರೇ ಹೊರಾಂಗಣ, ಒಳಾಂಗಣ, ಸೂಕ್ಷವಾದ ಡಿಸೈನ್ ವರ್ಕ್, ಮುಂತಾದವನ್ನು ಅತ್ಯಂತ ನಾಜೂಕಾಗಿ ಸೆರೆಯಿಡಿಯಬೇಕು. ಇದಕ್ಕೆ ವಿಶೇಷ ತಂತ್ರಜ್ಞಾನದ ಅರಿವಿರಬೇಕು. ಇಂದಿನ ಮಾರುಕಟ್ಟೆ ಕೂಡ ಸುಧಾರಿಸಿರುವುದರಿಂದ ಅತೀ ಹೆಚ್ಚಿನ ಗುಣಮಟ್ಟವನ್ನು ಫೋಟೋಗ್ರಾಫರ್ ಕಾಯ್ದುಕೊಳ್ಳಬೇಕು.

8) ಪ್ರವಾಸಿ ಛಾಯಾಗ್ರಹಣ(Travel Photography): ಪ್ರವಾಸವನ್ನು ಆನಂದಿಸುವವರಿಗೆ ಹೇಳಿ ಮಾಡಿಸಿದ ವೃತ್ತಿ ಇದು. ಜಗವನ್ನು ಸುತ್ತುವುದರ ಜೊತೆಗೆ ಅಲ್ಲಿ ತೆಗೆದ ಚಿತ್ರಗಳಿಗೂ ಸಂಭಾವನೆ ಪಡೆಯಬಹುದು. ಇಲ್ಲಿ ಪ್ರವಾಸಿಗರ ಪ್ರತಿಯೊಂದು ಆನಂದದ ಕ್ಷಣಗಳನ್ನು ಕೂಡ ಕ್ಯಾಮರ ಕಣ್ಣಲ್ಲಿ ಅಚ್ಚೊತ್ತಬೇಕು. ಮಾತ್ರವಲ್ಲದೆ ಪ್ರತಿಯೊಂದು ಕ್ಲಿಕ್ ಕೂಡ ನೈಸರ್ಗಿಗದತ್ತವಾಗಿರಬೇಕು. ಇದರಲ್ಲಿ ವೈಲ್ಡ್ ಲೈಫ್ ಪೋಟೋಗ್ರಫಿ ಬರುತ್ತದೆ.

9) ಕ್ರೀಡಾ ಛಾಯಾಗ್ರಹಣ (Sports Photography): ಈ ಫೋಟೋಗ್ರಫಿ ಪ್ರಕಾರವನ್ನು ರೂಢಿಸಿಕೊಳ್ಳಬಯಸಿದರೇ ನಿಮ್ಮ ಕ್ಯಾಮಾರದ ಗುಣಮಟ್ಟ ಅತ್ಯುತ್ತಮವಾಗಿರಬೇಕು. ಲಾಂಗ್ ಲೆನ್ಸ್ ಕ್ಯಾಮಾರ ಇದಕ್ಕೆ ಅತ್ಯಗತ್ಯವಾದುದು. ಇಲ್ಲಿ ತೆಗೆಯಲಾಗುವ ಫೋಟೋಗಳು ಕ್ರೀಡಾ ತಂಡದ ಪ್ರಚಾರ ಸಾಧನವಾಗುತ್ತದೆ.

10) ಏರಿಯಲ್ ಫೋಟೋಗ್ರಫಿ(Aerial Photography): ಆಧುನಿಕ ಜಗತ್ತಿನಲ್ಲಿ ಏರಿಯಲ್ ಪೋಟೋಗ್ರಫಿ ಬಹಳ ಪ್ರಾಮುಖ್ಯತೆ ಪಡೆದಿದೆ. ಡ್ರೋನ್ ಗಳ ಮೂಲಕ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪೋಟೋ ತೆಗೆಯುವುದನ್ನು ಗಮನಿಸಿರಬಹುದು. ಈ ತೆರನಾದ ಫೋಟೋಗ್ರಫಿಗೂ ಇಂದು ಬಹಳ ಬೇಡಿಕೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next