Advertisement
ಈಗಿನ ಕಾಲದಲ್ಲಂತೂ ಫೋಟೋಗ್ರಾಫರ್ಸ್ ಇಲ್ಲದೆ ಸಮಾರಂಭಗಳು ಪೂರ್ಣವಾಗುವುದು ಕಷ್ಟಸಾಧ್ಯ. ಮುಂಚೆ ಅಪರೂಪಕ್ಕೊಬ್ಬ ಛಾಯಾಗ್ರಾಹಕನಿದ್ದ. ಆ ದಿನಗಳಲ್ಲಿ ಸಮಾರಂಭಕ್ಕೆ ಬಂದ ಒಬ್ಬನೇ ಒಬ್ಬ ಫೋಟೋಗ್ರಾಫರ್ ಕೈಯಿಂದ ಫೋಟೋ ತೆಗೆಸಿಕೊಳ್ಳುವುದೆಂದರೆ ಹೇಳತೀರದ ಸಂತೋಷ.
Related Articles
Advertisement
ಇಂದು ಮದುವೆ ಮಾಡಲು ಭಟ್ರಾ ಎಷ್ಟು ಪ್ರಾಮುಖ್ಯವೋ ಛಾಯಾಗ್ರಾಹಕರೂ ಅಷ್ಟೇ ಮುಖ್ಯ. ಭಟ್ರಾ ಇಲ್ಲದಿದ್ದರೂ ಒಂದು ವೇಳೆ ವಿವಾಹ ಕಾರ್ಯ ಪೂರ್ಣವಾಗಬಹುದು ಆದರೆ ಛಾಯಾಗ್ರಾಹಕರಿಲ್ಲದೆ ಮದುವೆ ಸಂಪೂರ್ಣವಾಗಲು ಸಾಧ್ಯವೇ ಇಲ್ಲ.
ಎಲ್ಲ ಕೆಲಸದಂತೆ ಛಾಯಾಗ್ರಹಣವೂ ಒಂದು ಕಷ್ಟದ ಕೆಲಸ. ಅದರೊಳಗೆ ಇಳಿದಷ್ಟು ಆಳಕ್ಕೆ ಅದು ನಮ್ಮನ್ನು ಕೊಂಡೊಯ್ಯುತ್ತದೆ. ಛಾಯಾಗ್ರಹಣದಲ್ಲಿ ಕಲಿಕೆ ಬಹಳಷ್ಟಿದೆ. ಇಂದು ಫೋಟೋಗಳನ್ನು ತೆಗೆಯುವುದಕ್ಕಿಂತ ಅವನೆಷ್ಟು ಕ್ರಿಯೇಟಿವ್ ಆಗಿ ಫೋಟೋ ಕ್ಲಿಕ್ಕಿಸುತ್ತಾನೆ ಎಂಬುದರ ಮೇಲೆ ಛಾಯಾಗ್ರಾಹಕನ ಸಾಮರ್ಥ್ಯ ನಿರ್ಧಾರವಾಗುತ್ತದೆ. ಇದು ಛಾಯಾಗ್ರಾಹಕನಿಗಿರುವ ದೊಡ್ಡ ಸವಾಲು.
ಫೋಟೋದಲ್ಲಿ ಅಂದವಾಗಿ ಕಾಣಿಸಬೇಕೆಂಬ ಜನರ ಬಯಕೆಯನ್ನು ಛಾಯಾಗ್ರಾಹಕನಾದವನು ಈಡೇರಿಸುವಲ್ಲಿ ಕಾರ್ಯನಿರತನಾಗಲೇಬೇಕಾಗುತ್ತದೆ. ಅವನಿಗೆಷ್ಟೇ ನೋವಿರಲಿ, ಒತ್ತಡಗಳಿರಲಿ, ಅವನ ಜೀವನದಲ್ಲಿ ನಗುವೇ ಇಲ್ಲದಿರಲಿ ಆದ್ರೆ ಅವನು ತನ್ನ ಮುಂದಿರುವವರನ್ನು ನಗಿಸಲೇಬೇಕು, ಅವರ ಸುಂದರ ಕ್ಷಣಗಳನ್ನು ತನ್ನ ಕ್ಯಾಮರಾ ಕಣ್ಣಿಂದ ಸಂಗ್ರಹಿಸಲೇಬೇಕು.
ನಮ್ಮೆಲ್ಲರ ಜೀವನದ ಸುಂದರ ಕ್ಷಣಗಳನ್ನು ಕಲೆ ಹಾಕುತ್ತಾ, ಕಳೆದಂತಹ ಸುಮಧುರ ಸಮಯವನ್ನು ಮತ್ತೆ ನೆನಪಿಸುವಂತೆ ಮಾಡುವ, ಕೆಲವೊಮ್ಮೆ ಆ ಚಿತ್ರಗಳ ಮೂಲಕ ನಮ್ಮ ಕಣ್ಣಲ್ಲಿ ಆನಂದಭಾಷ್ಪವನ್ನು ತರಿಸುವ, ನಮಗೆ ತಿಳಿಯದಂತೆ ನಮ್ಮ ಫೋಟೋ ತೆಗೆದು ನಮ್ಮನ್ನು ಸಂತೋಷದಿಂದ ಹಿಗ್ಗುವಂತೆ ಮಾಡುವ ಎಲ್ಲ ಛಾಯಾಗ್ರಾಹಕರಿಗೆ ನನ್ನದೊಂದು ಸಲಾಂ.
-ಲಾವಣ್ಯ ಎಸ್.
ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು