Advertisement

ಸವಲತ್ತು ಪಡೆಯಲು ಛಾಯಾಗ್ರಾಹಕರು ಸಂಘಟಿತರಾಗಲಿ

03:17 PM Aug 21, 2017 | |

ದಾವಣಗೆರೆ: ಛಾಯಾಗ್ರಾಹಕರು ಸಂಘಟಿತರಾಗಿ ಸರ್ಕಾರದ ಸವಲತ್ತು ಪಡೆಯಲು ಯಶಸ್ವಿಯಾಗಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕರೆಕೊಟ್ಟಿದ್ದಾರೆ.

Advertisement

ರೇಣುಕಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಛಾಯಾಗ್ರಾಹಕರು ಸರ್ಕಾರದ ಸವಲತ್ತು ಪಡೆಯಲು ಸಂಘಟಿತರಾಗಲೇಬೇಕು. ಏಕಾಂಗಿಯಾಗಿ ಸರ್ಕಾರದ ಮುಂದೆ ಮನವಿ ಮಾಡಿದರೆ ಸರಿಯಾಗಿ ಸ್ಪಂದನೆ ಸಿಗೋಲ್ಲ. ಸಂಘಟಿತರಾಗಿ ಹೋರಾಡಿದರೆ ಯಶಸ್ಸು ಸಿಗಲಿದೆ. ಸರ್ಕಾರದ ಹಲವು ಸವಲತ್ತುಗಳು ಸಿಗಲಿವೆ ಎಂದರು.  ಇಂದು ಛಾಯಾಗ್ರಹಣ ರಂಗ ಸಾಕಷ್ಟು ಸುಧಾರಣೆ ಕಂಡಿದೆ. ಹಿಂದೆಲ್ಲಾ ಫೋಟೋ ತೆಗೆಸಿಕೊಳ್ಳಲು ಗಂಟೆಗಟ್ಟಲೇ ಕಾಯಬೇಕಿತ್ತು.ಆದರೆ, ಇಂದು ಕೆಲವೇ ನಿಮಿಷಗಳಲ್ಲಿ ಫೋಟೋ ತೆಗೆದುಕೊಡಬಲ್ಲ ತಂತ್ರಜ್ಞಾನ ಬಂದಿದೆ. ಇದರಿಂದಾಗಿ ಸಾಕಷ್ಟು ಜನರಿಗೆ ಉದ್ಯೋಗ ಸಿಗುವಂತೆ ಆಗಿದೆ ಎಂದರು.

ಎಸ್‌.ಎಸ್‌. ಜನಕಲ್ಯಾಣ ಟ್ರಸ್ಟ್‌ನಲ್ಲಿ ಛಾಯಾಗ್ರಾಹಕರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ 1 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಅದರಿಂದ ಬರುವ ಬಡ್ಡಿ ಹಣದಲ್ಲಿ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಬಳಸಲಾಗುತ್ತಿದೆ. ಸಧ್ಯ ಇದರಲ್ಲೇ ಇನ್ನೂ ಹಣ ಉಳಿಯುತ್ತಿದ್ದು, ಫೋಟೋಗ್ರಾಫರ್ ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಟ್ರಸ್ಟ್‌ನಿಂದ ನೆರವು ಪಡೆಯಬೇಕು ಎಂದು ತಿಳಿಸಿದರು.

ರಾಜ್ಯ ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಬಿ.ಎಸ್‌. ಶಶಿಧರ್‌ ಮಾತನಾಡಿ, 4ನೇ ಶತಮಾನದಲ್ಲೇ ಗ್ರೀಕ್‌ ದೇಶದಲ್ಲಿ ಪಿನ್‌ಹೋಲ್‌ ರಿಂದ ಕ್ಯಾಮರಾ ಪರಿಕಲ್ಪನೆ ರೂಪತಾಳಿ, ಅದು ಫೋಟೋಗ್ರಫಿ ಹಂತಕ್ಕೆ ಬರಲು 19ನೇ ಶತಮಾನದವರೆಗೂ ಕಾಯಬೇಕಾಯಿತು. ಹೀಗೆ ವಿವಿಧ ಹಂತಗಳನ್ನು ದಾಟಿ ಇಂದಿನ ಆಧುನಿಕ ಫೋಟೋಗ್ರಫಿ ರೂಪುಗೊಂಡಿದೆ. ಭೂ, ನಭೋ ಮಂಡಲ ಸೇರಿದಂತೆ ಮನುಷ್ಯ ಬದುಕಿನ ಎಲ್ಲ ಮಗ್ಗಲುಗಳನ್ನೂ ಫೋಟೋಗ್ರಫಿ 
ಸ್ಪರ್ಶಿಸುವ ಮೂಲಕ ಮಾನವ ಪ್ರಗತಿಗೆ ತನ್ನದೇ ಕೊಡುಗೆ ನೀಡುತ್ತಿದೆ ಎಂದರು. ಛಾಯಾಗ್ರಾಹಕರಲ್ಲಿ ವೃತ್ತಿಪರ, ಅಸಂಘಟಿತ, ಹವ್ಯಾಸಿ ಹೀಗೆ ಅನೇಕ ವರ್ಗಗಳಿದ್ದು, ಪ್ರತಿಯೊಬ್ಬರೂ ಅವರದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಕೌಶಲ್ಯ ವೃದ್ಧಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಎದುರಾಗಿದೆ. ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಛಾಯಾಗ್ರಾಹಕರು ಸಂಘಟಿತರಾಗಬೇಕು ಎಂದು ಕರೆನೀಡಿದರು. ಅಸೋಸಿಯೇಷನ್‌ನಿಂದ ಫೋಟೋ
ಗ್ರಾಫರ್ಗಳನ್ನು ಸಂಘಟಿಸುವ ಕಾರ್ಯ ಶೇ. 80ರಷ್ಟು ಯಶ ಕಂಡಿದೆ. ರಾಜ್ಯದ 27 ಜಿಲ್ಲೆಗಳ ಫೋಟೋಗ್ರಾಫರ್ ಸಂಘಗಳು ರಾಜ್ಯ ಸಂಘದೊಂದಿಗೆ ಗುರುತಿಸಿಕೊಂಡಿವೆ. ನಾವೆಲ್ಲರೂ ಸಂಘಟಿತರಾದಾಗ ಮಾತ್ರ ಸರ್ಕಾರಕ್ಕೆ ನಮ್ಮ ಕೂಗು ಕೇಳಿಸಲಿದೆ.

Advertisement

ಫೋಟೋಗ್ರಫಿ ಕಲೆಯನ್ನು ಉಳಿಸಿ, ಬೆಳೆಸಲು ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕೆಂಬ ಪ್ರಮುಖ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು. ಜಿಲ್ಲಾ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಸಂಘದ ಅಧ್ಯಕ್ಷ ಶಿಕಾರಿ ಶಂಭು ಅಧ್ಯಕ್ಷತೆ ವಹಿಸಿದ್ದರು. ಫೋಟೋಗ್ರಾಫರ್ ಅಸೋಸಿಯೇಷನ್‌ ರಾಜ್ಯ ಉಪಾಧ್ಯಕ್ಷ ಎಚ್‌.ಎಸ್‌.ನಾಗೇಶ್‌, ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ್‌, ಯೂತ್ಸ್ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಎಚ್‌. ಕೆ.ಸಿ. ರಾಜು, ಕಾರ್ಯದರ್ಶಿ ಎಸ್‌.ಎಂ. ಪಂಚಾಕ್ಷರಯ್ಯ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next