ವಾಷಿಂಗ್ಟನ್: ಏನಾದರೂ ಕಳ್ಳತನವಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಪೊಲೀಸರು ತನಿಖೆ ನಡೆಸಿ, ಆರೋಪಿ ಸೆರೆಸಿಕ್ಕ ಬಳಿಕ ವಿಚಾರಣೆ ನಡೆಸುವುದು ಕ್ರಮ. ಆದರೆ ಇಲ್ಲೊಂದು ನಾಯಿ ಆಹಾರ ಕದ್ದು ತಿಂದ ಕಾರಣಕ್ಕಾಗಿ ಆರೋಪಿ ಸ್ಥಾನದಲ್ಲಿ ನಿಂತಿದೆ.
ಅಮೆರಿಕಾದ ಮಿಚಿಗನ್ ರಾಜ್ಯದ ವಾಯೈನ್ಟೊಂಟ್ಟೆ ಪೊಲೀಸ್ ಇಲಾಖೆ ( Wyandotte Police Department) ಪೊಲೀಸ್ ಡಾಗ್ “ಐಸ್” ಆಹಾರವನ್ನು ಕದ್ದು ತಿಂದ ಆರೋಪಿ.!
ಜ.12 ರಂದು ವಾಯೈನ್ಟೊಂಟ್ಟೆ ಪೊಲೀಸ್ ಠಾಣೆಗೆ ಪ್ರಕರಣವೊಂದರ ಸಂಬಂಧ ಸಹಾಯ ಮಾಡಲು ಬಾರ್ವಿಗ್ ಎಂಬ ಅಧಿಕಾರಿ ಬಂದಿದ್ದರು. ವಿಶ್ರಾಂತಿ ಕೋಣೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಮತ್ತೊಬ್ಬ ಅಧಿಕಾರಿ ಬಾರ್ವಿಗ್ ಅವರನ್ನು ಕರೆದಿದ್ದಾರೆ. ಈ ವೇಳೆ ಟೇಬಲ್ ಮೇಲೆ ಊಟ ಇಟ್ಟು ಹೋಗಿದ್ದಾರೆ. ಕೆಲ ಸಮಯದ ಬಳಿಕ ಬಂದು ನೋಡಿದಾಗ ಅರ್ಧ ತಿಂದು ಹೋದ ಊಟ ಪೂರ್ತಿ ಖಾಲಿಯಾಗಿದೆ.
ಪಕ್ಕದಲ್ಲೇ ಇದ್ದ ಪೊಲೀಸ್ ಡಾಗ್ ಏನೋ ತಿಂದು ಕೈ ನೆಕ್ಕುವಂತೆ ತನ್ನ ಕಾಲುಗಳನ್ನು ನೆಕ್ಕುತ್ತಿತ್ತು. ಠಾಣೆಯ ಪೊಲೀಸರು ಪೊಲೀಸ್ ಡಾಗ್ ಐಸ್ ನನ್ನು ಆರೋಪಿ ಸ್ಥಾನದಲ್ಲಿ ಕೂರಿಸಿದ್ದಾರೆ.
ಇಡೀ ಘಟನೆಯ ಬಗ್ಗೆ ಬರೆದುಕೊಂಡು ಐಸ್ ಫೋಟೋ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಹಾಕಿದ್ದು, ಈ ಪೋಸ್ಟ್ 25 ಸಾವಿರಕ್ಕೂ ಹೆಚ್ಚಿನ ಲೈಕ್ಸ್, 14 ಸಾವಿರಕ್ಕೂ ಹೆಚ್ಚಿನ ಮಂದಿ ಹಂಚಿಕೊಂಡಿದ್ದಾರೆ.
ಐಸ್ ಆಹಾರ ಕದ್ದ ಆರೋಪ ಸಾಬೀತು ಆಗುವವರೆಗೂ ಆತ ಮುಗ್ಧ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.