ನವದೆಹಲಿ: ಒಂದಿಲ್ಲೊಂದು ವಿಚಾರದಲ್ಲಿ ವಂದೇ ಭಾರತ್ ರೈಲಿನ ಹೆಸರು ಕೇಳಿ ಬರುತ್ತಿದ್ದು ಇದೀಗ ರೈಲಿನೊಳಗೆ ಕಸದ ರಾಶಿ ತುಂಬಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆ ರೈಲಿಗೆ ಕಲ್ಲೆಸೆಯುವುದು ದನಕ್ಕೆ ಡಿಕ್ಕಿ ಹೊಡೆದಿರುವ ವಿಚಾರದಲ್ಲಿ ಪ್ರಚಲಿತದಲ್ಲಿದ್ದ ವಂದೇ ಭಾರತ್ ರೈಲಿನ ಬೋಗಿಯೊಳಗೆ ಕಸದ ರಾಶಿ ಬಿದ್ದಿರುವ ಫೋಟೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಖಾಲಿ ಬಾಟಲಿಗಳು, ಆಹಾರದ ಡಬ್ಬಿಗಳು ಮತ್ತು ಪ್ಲಾಸ್ಟಿಕ್ ಚೀಲಗಳು ರೈಲಿನೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಾಣಬಹುದು.
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಾವು ತಿಂದ ಆಹಾರ ಪದಾರ್ಥಗಳ ಪೊಟ್ಟಣ, ನೀರಿನ ಬಾಟಲಿಗಳನ್ನು ಬೋಗಿಯೊಳಗೆ ಎಲ್ಲೆಂದರಲ್ಲಿ ಚೆಲ್ಲಿರುವುದು ಕಾಣಬಹುದು ಇದನ್ನು ಅಲ್ಲಿನ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛಗೊಳಿಸುವ ಚಿತ್ರಣ ಕಾಣಬಹುದು.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಪೋಸ್ಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ, ಪ್ರಯಾಣಿಕರ ಈ ಕೆಲಸಕ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಭವನದ ‘ಮೊಘಲ್ ಗಾರ್ಡನ್ ‘ ಇನ್ನು ‘ಅಮೃತ್ ಉದ್ಯಾನ್’ ಆಗಿ ಮರುನಾಮಕರಣ