Advertisement

ಜನಾಕರ್ಷಿಸಿದ ಗೋಪಿಚಂದ್‌ ಛಾಯಾಚಿತ್ರ ಪ್ರದರ್ಶನ

03:33 PM Nov 30, 2020 | Suhan S |

ಬೀದರ: ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನ. 27ರಿಂದ ಮೂರು ದಿನಗಳ ಕಾಲ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ ಕೋವಿಡ್‌- 19 ಲಾಕ್‌ಡೌನ್‌ ಬವಣೆ ಛಾಯಾಚಿತ್ರ ಪ್ರದರ್ಶನದಲ್ಲಿ ಬೀದರನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ ತಾಂದಳೆ ಅವರು ಕೋವಿಡ್ ಸಂಕಷ್ಟದಲ್ಲಿ ತೆಗೆದ ಫೋಟೋಗಳು ಪ್ರದರ್ಶನಗೊಂಡು ಆಕರ್ಷಿಸಿದವು.

Advertisement

ಲಾಕ್‌ಡೌನ ವೇಳೆ ಜನರ ಬವಣೆಗಳನ್ನು ಕಲಾತ್ಮಕವಾಗಿ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಸಿಎಂ ಯಡಿಯುರಪ್ಪ ಚಾಲನೆ ನಿಡಿದರು. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ನೆರೆ ಅನಾಹುತಗಳ ಬಗ್ಗೆ ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಈ ಚಿತ್ರ ತೆಗೆಯಲು ಛಾಯಾಚಿತ್ರಗಾರರು ಪಡೆದ ಕಷ್ಟ ಯಾರ ಗಮನಕ್ಕೂ ಬರುವುದಿಲ್ಲ. ಇದು ಇತಿಹಾಸ ಮರುಕಳಿಸಿದೆ ಎಂದು ಪ್ರಶಂಸಿದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಛಾಯಾಗ್ರಾಹಕರ ಕೈ ಚಳಕದಿಂದ ಜನತೆಯ ಜೀವನದ ದೃಶ್ಯಗಳು ಮುಂದೊಂದು ದಿನ ಇತಿಹಾಸದ ಪುಟಗಳ ದಾಖಲೆಗಳಿವೆ. ಪ್ರಸ್ತುತ ಪ್ರದರ್ಶನವಾಗುತ್ತಿರುವ ಚಿತ್ರಗಳು ಭವಿಷ್ಯದಲ್ಲಿ ಎದುರಾಗುವ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅರಿವು ಮೂಡಿಸಲು ನೆರೆವಾಗಲಿವೆ. ಅಲ್ಲದೆ ಈ ಎಲ್ಲ ಚಿತ್ರಗಳು ಸಂಗ್ರಹಕ್ಕೆ ಅರ್ಹವಾಗಿದ್ದು ಮ್ಯೂಸಿಯಂ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಿಕಾ ಛಾಯಾಗ್ರಾಹಕರು ಸೆರೆ ಹಿಡಿದಿರುವ ಉತ್ತಮ ಒಟ್ಟು 102 ಛಾಯಾಚಿತ್ರಗಳು ಪ್ರದರ್ಶನಗೊಂಡವು. ಲಿಂಗಾಯತ ಪಂಚಮಶಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಈಶ್ವರ, ಶಿವಾನಂದ ತಗಡೂರು, ರೋಷಿಣಿ, ರವಿರಾಜ ಪಾಟೀಲ, ಮಾಯಣ್ಣಾ ಇತರರು ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next