Advertisement

ತಮ್ಮ ವಶದಲ್ಲಿರುವ ಯೋಧನ ಫೋಟೊ ಹರಿಬಿಟ್ಟ ನಕ್ಸಲೀಯರು

03:58 PM Apr 07, 2021 | Team Udayavani |

ನವದೆಹಲಿ: ನಕ್ಸಲೀಯರು ತಮ್ಮ ವಶದಲ್ಲಿರುವ CRPF ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಎಂದು ಅರೆಸೇನಾ ಪಡೆಯ ಮೂಲಗಳು ತಿಳಿಸಿವೆ.

Advertisement

ಇಂದು ಮುಂಜಾನೆಯಷ್ಟೆ ಕೋಬ್ರಾ ಕಮಾಂಡೋ ಯೋಧ ರಾಕೇಶ್ವರ್ ಸಿಂಗ್ ಬಿಡುಗಡೆಗೆ ಮಧ್ಯವರ್ತಿಗಳನ್ನು ಕಳುಹಿಸಿ ಎಂದು ನಕ್ಸಲರು ಷರತ್ತಿನ ಪತ್ರ ಬಿಡುಗಡೆ ಮಾಡಿದ್ದಾರೆ. ಸಿಪಿಐ(ಮಾವೋವಾದಿ) ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಎಸ್ ಝಡ್ ಸಿ) ಬರೆದಿರುವ ಎರಡು ಪುಟಗಳ ಪತ್ರದಲ್ಲಿ, ಅಪಹರಿಸಲ್ಪಟ್ಟ ಕೋಬ್ರಾ ಕಮಾಂಡೋ ನಮ್ಮ ವಶದಲ್ಲಿ ಸುರಕ್ಷಿತವಾಗಿದ್ದಾರೆ. ಮಧ್ಯಸ್ಥಿಕೆ ಮಾತುಕತೆ ನಂತರ ಕಮಾಂಡೋ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸುವುದಾಗಿ ತಿಳಿಸಿತ್ತು.  ಇದೀಗ ಪತ್ರ ಹೊರ ಬಂದ ಕೆಲ ಸಮಯದ ನಂತರ ಮಾವೋವಾದಿ ಸಂಘಟನೆ ಯೋಧನ ಫೋಟೊ ರಿಲೀಸ್ ಮಾಡಿದೆ. ಅಪಹರಿಸ್ಪಟ್ಟ ಯೋಧನ ಬಿಡುಗಡೆಗೆ   ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಸಿಆರ್‍ ಪಿಎಫ್ ಮೂಲಗಳು ತಿಳಿಸಿವೆ.

ಇನ್ನು ಛತ್ತೀಸಗಡ ಬಿಜಾಪುರ ಹಾಗೂ ಸೂಕ್ಮಾ ಎಂಬಲ್ಲಿ ಅರೆಸೇನಾ ಪಡೆ ಹಾಗೂ ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಕದನದಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಕಾಳಗದ ವೇಳೆ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಮಾವೋವಾದಿಗಳು ಅಪಹರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next