Advertisement

ಇನ್ಮುಂದೆ ಪದವಿ ಅಂಕಪಟ್ಟಿಯಲ್ಲಿ ಭಾವಚಿತ್ರ

11:52 AM Mar 23, 2017 | Team Udayavani |

ನವದೆಹಲಿ: ಇನ್ನು ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಭಾವಚಿತ್ರ, ಆಧಾರ್‌ ನಂಬರ್‌ ಇರಲಿದೆ. ಜೊತೆಗೆ ಹೆಚ್ಚಿನ
ಸುರಕ್ಷತಾ ಸೌಲಭ್ಯಗಳೂ ಇರಲಿವೆ. ಈ ಮೂಲಕ ಅಂಕಪಟ್ಟಿ ನಕಲಿ, ಕಳೆದು ಹೋದರೆ ಸುಲಭದಲ್ಲಿ ಪತ್ತೆಗೆ ನೆರವಾಗುವ ಕ್ರಮವೊಂದನ್ನು ಯುಜಿಸಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಪದವಿ ಅಂಕಪಟ್ಟಿ ಮತ್ತು ವಿದ್ಯಾರ್ಥಿಗಳ ಗುರುತು ಚೀಟಿಯಲ್ಲಿ ಭಾವಚಿತ್ರ ಮತ್ತು ಆಧಾರ್‌ ಮಾಹಿತಿಯನ್ನು ನಮೂದಿಸುವಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸೂಚನೆ ನೀಡಿದೆ.

Advertisement

ಇದರೊಂದಿಗೆ ಅಂಕಪಟ್ಟಿಗಳಲ್ಲಿ ಸುರಕ್ಷತಾ ಸೌಲಭ್ಯಗಳನ್ನೂ ಅಳವಡಿಸುವಂತೆ ಯುಜಿಸಿ ಹೇಳಿದೆ. “ನೂತನ ಕ್ರಮದಿಂದಾಗಿ ಅಂಕಪಟ್ಟಿಯಂತಹ ಮಹತ್ವದ ದಾಖಲೆಗಳು ನಕಲಿಯಾಗುವುದನ್ನು ತಡೆದಂತಾಗುತ್ತದೆ. ಜೊತೆಗೆ ಪಾರದರ್ಶಕತೆ, ಏಕರೂಪತೆಯನ್ನು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕಾಯ್ದುಕೊಂಡಂತಾಗುತ್ತದೆ’ ಎಂದು ಯುಜಿಸಿ
ಕಾರ್ಯದರ್ಶಿ ಜೆ.ಎಸ್‌ ಸಂಧು ಅವರು ವಿಶ್ವವಿದ್ಯಾಲಯಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ವಿದ್ಯಾರ್ಥಿಗಳ ಗುರುತು ಚೀಟಿ ವ್ಯವಸ್ಥೆಗೆ ಭಾವಚಿತ್ರ, ಆಧಾರ್‌ ನಂಬರ್‌ ಅನ್ನು ವಿದ್ಯಾಸಂಸ್ಥೆಗಳು ಪಡೆದು ಅದನ್ನು ಅಂಕಪಟ್ಟಿಯಲ್ಲೂ ನಮೂದಿಸಬೇಕು. ಜೊತೆಗೆ ಸುರಕ್ಷತಾ ಮಾನದಂಡವಾಗಿ, ವಿದ್ಯಾರ್ಥಿಗಳು ಸೇರಿದ ಕಲಿಕಾ ಸಂಸ್ಥೆಗಳ ಹೆಸರನ್ನೂ ನಮೂದಿಸಬೇಕು. ಜೊತೆಗೆ ಅಂಕಪಟ್ಟಿ ನೀಡಿಕೆ ವೇಳೆ ವಿದ್ಯಾರ್ಥಿಗಳು, ಅರೆಕಾಲಿಕ, ಪೂರ್ಣಕಾಲಿಕ, ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ಬಗ್ಗೆಯೂ ನಮೂದಿಸಬೇಕು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next