Advertisement

“ಪೆಗಾಸಸ್”ಬಳಸಿ ಭಾರತದ ಪತ್ರಕರ್ತರು, ರಾಜಕಾರಣಿಗಳ ಫೋನ್ ಮೇಲೆ ನಿಗಾ!

10:00 AM Jul 19, 2021 | Team Udayavani |

ಹೊಸದಿಲ್ಲಿ: ಜಗತ್ತಿನ ಪ್ರಮುಖ ಪತ್ರ ಕರ್ತರು, ರಾಜಕೀಯ ಕ್ಷೇತ್ರದ ವ್ಯಕ್ತಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ರಾಯಭಾರ ಕಚೇರಿಗಳಲ್ಲಿ ಕೆಲಸ ಮಾಡುವ ಪ್ರಮುಖರ ದೂರವಾಣಿ ಕದ್ದಾಲಿಸುವ ಪ್ರಯತ್ನ ಮತ್ತು ನಿಗಾ ಇರಿಸುವ ಪ್ರಯತ್ನ ನಡೆಸಲಾಗಿದೆ. ಈ ಬಗ್ಗೆ “ದ ಗಾರ್ಡಿಯನ್‌’ ಮತ್ತು ಇತರ 16 ಮಾಧ್ಯಮ ಸಂಸ್ಥೆಗಳು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ.

Advertisement

ಇಸ್ರೇಲ್‌ನ ಗುಪ್ತಚರ ಸಂಸ್ಥೆ ಪೆಗಸಸ್‌ ಹ್ಯಾಕ್‌ ಮಾಡುವ ಮೂಲಕ ಇಂಥ ಪ್ರಯತ್ನ ನಡೆಸಲಾಗಿದೆ. ಭಾರತದಲ್ಲಿ ಕೂಡ ಸುಮಾರು 40 ಪತ್ರಕರ್ತರ ಮೇಲೆ ನಿಗಾ ಇರಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಭಾರತ ಸರಕಾರ ಸೇರಿದಂತೆ ಜಗತ್ತಿನ ಹತ್ತು ರಾಷ್ಟ್ರಗಳ ಸರಕಾರಗಳಿಗಾಗಿ ಈ ನಿಗಾ ಇರಿಸಲಾಗಿತ್ತು ಎಂದು ವರದಿಯಲ್ಲಿ ಹೇಳಿಕೊಳ್ಳಲಾಗಿದೆ. ಸುಮಾರು 50 ಸಾವಿರ ಫೋನ್‌ ನಂಬರ್‌ಗಳ ಮೇಲೆ ನಿಗಾ ಇರಿಸಲಾಗಿತ್ತು ಎಂದು “ದ ಗಾರ್ಡಿಯನ್‌’ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

“ಕ್ಯಾಂಡಿರು’ ಎಂಬ ಹೆಸರಿನ ಸಂಸ್ಥೆ ಏಷ್ಯಾ, ಮಧ್ಯಪ್ರಾಚ್ಯ ದೇಶಗಳಲ್ಲಿರುವ ಸರಕಾರಗಳಿಗೆ ದೂರವಾಣಿ ಕದ್ದಾಲಿಕೆ ಮಾಡುವ ಅತ್ಯಾಧುನಿಕ ಗೂಡಚರ್ಯೆ ಉಪಕರಣಗಳನ್ನು ಮಾರಾಟ ಮಾಡಿತ್ತು.

ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ|ಸುಬ್ರಮಣಿಯನ್‌ ಸ್ವಾಮಿ ಭಾನುವಾರ ಬೆಳಗ್ಗೆ ಟ್ವೀಟ್‌ ಮಾಡಿ, ಮೋದಿ ಸಚಿವ ಸಂಪುಟದ ಸದಸ್ಯರು, ಆರ್‌ಎಸ್‌ಎಸ್‌ ಮುಖಂಡರು, ಸುಪ್ರೀಂಕೋರ್ಟ್‌ನ ನ್ಯಾಯ ಮೂರ್ತಿಗಳು, ಪತ್ರಕರ್ತರ ಫೋನ್‌ ಕದ್ದಾಲಿಕೆ ನಡೆಸಲಾಗುತ್ತಿದ್ದ ಬಗ್ಗೆ ವಾಷಿಂಗ್ಟನ್‌ ಪೋಸ್ಟ್‌, ಲಂಡನ್‌ ಗಾರ್ಡಿಯನ್‌ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಲಿದೆ. ನನಗೆ ಪಟ್ಟಿ ಸಿಕ್ಕಿದರೆ ಪ್ರಕಟಿಸುವೆ ಎಂದು ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next