Advertisement

ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಫೋನ್‌ಇನ್‌

07:49 AM Jun 24, 2020 | Suhan S |

ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್‌ ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಮತ್ತು ವ್ಯವಸ್ಥಿತ ನಡೆಯುವ ಕುರಿತು ವಿದ್ಯಾರ್ಥಿಗಳಿಗೆ ಫೋನ್‌ ಇನ್‌ ಕಾರ್ಯಕ್ರಮವನ್ನು ಜೂ. 24 ಮಧ್ಯಾಹ್ನ 2 ರಿಂದ 3ರವರೆಗೂ ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಜೂ.25ರಿಂದ ಜು.4ರವರೆಗೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯ ಪೂರ್ವ ಸಿದ್ಧತೆ ಮತ್ತು ವ್ಯವಸ್ಥಿತವಾಗಿ ನಡೆಯುವ ಕುರಿತು ಎಸ್‌.ಎಸ್‌. ಎಲ್‌.ಸಿ ವಿದ್ಯಾರ್ಥಿಗಳಿಗೆ ಫೋನ್‌ ಇನ್‌ ಕಾರ್ಯಕ್ರಮವನ್ನು ಜೂ.24 ಮಧ್ಯಾಹ್ನ 02 ರಿಂದ 03 ಗಂಟೆಯವರೆಗೆ ಆಯೋಜಿಸಲಾಗಿದೆ. ಜಿಲ್ಲೆಯ ಉಪನಿರ್ದೇಶಕರು ಹಾಗೂ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಿರುವರು. ವಿದ್ಯಾರ್ಥಿಗಳು ಹಾಗೂ ಪಾಲಕರು ತಮ್ಮ ಅಭಿಪ್ರಾಯ ಮತ್ತು ಸಂದೇಹಗಳನ್ನು ಅಧಿಕಾರಿಗಳೊಂದಿಗೆ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕರೆ ಮಾಡಿ, ಸೂಕ್ತ ಸಲಹೆ ಪಡೆಯಬಹುದು.

ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ 9448999346, ಕೊಪ್ಪಳ ಬಿಇಒ ಉಮಾದೇವಿ ಸೊನ್ನದ 9480695279, ಗಂಗಾವತಿಯ ಸೋಮಶೇಖರಗೌಡ 9480695278, ಯಲಬುರ್ಗಾದ ಶರಣಪ್ಪ ವಟಗಲ್‌ 9480695281, ಕುಷ್ಟಗಿಯ ಚನ್ನಬಸಪ್ಪ ಎಂ. 9480695280 ಹಾಗೂ ಜಿಲ್ಲಾ ನೋಡಲ್‌ ಅ ಧಿಕಾರಿ ಸುಜಾತಾ 9448973573 ಕ್ಕೆ ಸಂಪರ್ಕಿಸಬಹುದು ಎಂದು ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next