Advertisement
ನಗರದ ನಿವೃತ್ತ ಶಿಕ್ಷಕರೊಬ್ಬರಿಗೆ ದಿನಸಿ ಖರೀದಿಗೆ ಹಣ ಬೇಕಾಗಿತ್ತು. ಬ್ಯಾಂಕ್‌ಗೆ ವಾಹನದಲ್ಲಿ ತೆರಳಬೇಕು. ಲಾಕ್‌ಡೌನ್‌ನಡಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕಾರು ಹೊರತೆಗೆಯಲು ಮನಸೊÕಪ್ಪಲಿಲ್ಲ. ಕಾಲ್ನಡಿಗೆಯಲ್ಲಿ ತೆರಳಲು ವಯಸ್ಸಿನ ಸಮಸ್ಯೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದರು.
ಇದರಂತೆ ಸಿಬಂದಿಯೊಬ್ಬರು ಶಿಕ್ಷಕರ ಮನೆಗೆ ತೆರಳಿದರು. ಅವರು ಚೆಕ್ ಬರೆದು ಕೊಟ್ಟು ಬ್ಯಾಂಕ್‌ಗೆ
ಹೋಗಿ ಹಣ ಡ್ರಾ ಮಾಡಿ ತಂದು ಕೊಡುವಂತೆ ವಿನಂತಿಸಿದರು. ಸಿಬಂದಿ ಹಾಗೆಯೇ ಮಾಡಿದರು. ನಿವೃತ್ತ ಶಿಕ್ಷಕರು ಲಾಕ್‌ಡೌನ್ ಉಲ್ಲಂಘನೆ ಮಾಡದೆಯೇ ವಾರ್‌ರೂಂ ನೆರವು ಪಡೆದು ಹಣವನ್ನು ನಗದಾಗಿ ಪಡೆಯುವುದಕ್ಕಾಯಿತು!
Related Articles
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್ ರೂಂ ಮತ್ತು ದ.ಕ. ಜಿಲ್ಲಾಡಳಿತದ ಅಧೀನ ಮನಪಾದಲ್ಲಿರುವ ಕೊರೊನಾ ಮೇಲ್ವಿಚಾರಣ ಕೇಂದ್ರದಲ್ಲಿ ದಾಖಲಾಗುತ್ತಿರುವ ಚಿತ್ರವಿಚಿತ್ರ “ನೆರವಿಗೆ ಮನವಿ’ಗಳ ಸ್ಯಾಂಪಲ್ ಇದು. ಇತ್ತೀಚೆಗೆ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು “ಮೊಟ್ಟೆ ಹಾಗೂ ಮ್ಯಾಗಿ ಬೇಕು’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್ ಮಾಡಿದ್ದರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿ ಇದನ್ನು ನೋಡಿ ಸಂಸದರ ವಾರ್ ರೂಂಗೆ ಸೂಚಿಸಿ ಆಕೆ ಕೇಳಿದ್ದನ್ನು ಕೊಟ್ಟು ಬಂದಿದ್ದರು.
Advertisement
“ಖರ್ಚಿಗೆ ಹಣ ಕೊಡಿ… ಮದ್ಯ ಕೊಡಿ…’ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದ್ದು ಹಲವರಿಗೆ ಸಮಸ್ಯೆಯಾಗಿದೆ. ಹತಾಶರಾದ ಕೆಲವರು ಸಂಸದರ ವಾರ್ ರೂಂ, ಜಿಲ್ಲಾಡಳಿತದ ಕೇಂದ್ರಕ್ಕೆ ಕರೆ ಮಾಡಿ ಮದ್ಯ ನೀಡುವಂತೆ ಗೋಗರೆಯುತ್ತಿದ್ದಾರೆ. ಇನ್ನೂ ಕೆಲವರು ಖರ್ಚಿಗೆ ಹಣವಿಲ್ಲ; ಸಹಾಯ ಮಾಡಿ ಎನ್ನುತ್ತಿದ್ದಾರೆ. ಗ್ಯಾಸ್ ಖಾಲಿ, ಕರೆಂಟ್ ಹೋಗಿದೆ, ಬೈಕಿನ ಇಎಂಐ ಪಾವತಿಸುತ್ತೀರಾ, ಮೊಟ್ಟೆ ಕೊಡಿ… ಹೀಗೂ ಕರೆ ಮಾಡುವವರಿದ್ದಾರೆ!