Advertisement
ಶುಭ ಸಮಾರಂಭಗಳು ಸರಳವಾಗಿ ನಡೆಯುತ್ತಿರುವ ಕಾರಣ ಆರೇಳು ತಿಂಗಳಿಂದ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದ ಸಂಗೀತ ಕಲಾವಿದರಿಗೆ ಅವಕಾಶ ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷದಿಂದ ಮಂಗಳೂರು ನಗರ ಸಹಿತ ಜಿಲ್ಲೆಯಲ್ಲಿ ಸಂಗೀತ ಪ್ರದರ್ಶನ ನೀಡುತ್ತಿದ್ದ ಈ ಕಲಾವಿದರಿಗೆ ದುಡಿಮೆ ಇಲ್ಲದ್ದರಿಂದ ದೈನಂದಿನ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲೂ ಕಷ್ಟವಾಯಿತು. ಹಾಗಂತ ಕೈ ಕಟ್ಟಿ ಕುಳಿತು ಕೊಳ್ಳಲಿಲ್ಲ. ಬದಲಾಗಿ ಮನೆಯಲ್ಲೇ ಫಿನಾಯಿಲ್, ಸೋಪ್ ಆಯಿಲ್ ತಯಾರಿಸಿ ಮಾರತೊಡಗಿದರು.
ವಿವಿಧ ಜಿಲ್ಲೆಗಳಿಂದ ಬಂದ ಎ.ಎನ್. ಯೋಗೀಶ್, ಕೃಷ್ಣ, ಮಂಜುನಾಥ, ಜ್ಯೋತಿ ಶೃಂಗೇರಿ, ಪ್ರವೀಣ್, ಸತೀಶ್, ಕೆ.ಎಸ್. ಮಂಜುನಾಥ್ ಈ ತಂಡದಲ್ಲಿ ದ್ದಾರೆ. ಅವರಲ್ಲಿ ಕೆಲವರು ಬಾಲ್ಯದಲ್ಲಿ ವಿಶೇಷ ಅಂಧರ ಶಾಲೆಯಲ್ಲಿ ಕಲಿಯುವಾಗ ಪಠ್ಯೇತರ ಚಟುವಟಿಕೆಯ ವೇಳೆ
ಫಿನಾಯಿಲ್, ಸಾಬೂನು ಆಯಿಲ್ ತಯಾರಿಸುವುದನ್ನು ಕಲಿತಿದ್ದರು. ಅದೇ ಮಾಹಿತಿ ಮತ್ತು ಕೌಶಲ ಇದೀಗ ಅವರ ಹೊಸ ಉದ್ಯೋಗಕ್ಕೆ ಸಹಕಾರಿ ಯಾಗಿದೆ. ಜಲ್ಲಿಗುಡ್ಡೆ ರಸ್ತೆಯಲ್ಲಿರುವ ಮನೆಯಲ್ಲಿ ಪ್ರತೀ ದಿನ ಸುಮಾರು 70 ಲೀಟರ್ ಫಿನಾಯಿಲ್, ಸೋಪ್ ಆಯಿಲ್ ತಯಾರು ಮಾಡುತ್ತಿದ್ದಾರೆ. “ಸುಗಂಧ’ ಹೆಸರಿನಲ್ಲಿ ಬಾಟಲಿಗಳಲ್ಲಿ ತುಂಬಿ ಮನೆಗಳಿಗೆ, ಕಚೇರಿಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದಾರೆ. ಪ್ರೋತ್ಸಾಹ ಬೇಕಾಗಿದೆ
ತಂಡದ ಸದಸ್ಯರೆಲ್ಲರೂ ಸದ್ಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದೇವೆ. ಒಂದು ತಿಂಗಳಿನಿಂದ ಫಿನಾಯಿಲ್, ಸೋಪ್ ಆಯಿಲ್ ಮಾರಾಟದ ಹಣದಿಂದಲೇ ಜೀವನ ಸಾಗುತ್ತಿದೆ. ಲಾಕ್‌ಡೌನ್ ವೇಳೆ ದಾನಿಗಳು, ಸ್ನೇಹಿತರು ಹಣ ನೀಡುತ್ತಿದ್ದರು. ಮುಂದೆ ಏನೆಂದು ತಿಳಿಯದು, ದಾನಿಗಳ ಪ್ರೋತ್ಸಾಹವೂ ನಿರೀಕ್ಷಿಸುತ್ತಿದ್ದೇವೆ.
Related Articles
Advertisement