ನವ ದೆಹಲಿ : ಫಿಲಿಪ್ಸ್ ಗ್ಲೋಬಲ್ ಸಿಇಒ ಫ್ರಾನ್ಸ್ ವ್ಯಾನ್ ಹೌಟನ್ ಭಾರತದಲ್ಲಿ 300 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.
ದೇಶದಲ್ಲಿ 1,500 ಮOದಿಯನ್ನು ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಿಸಿಕೊಳ್ಳುವುದಕ್ಕೆ ಸಂಸ್ಥೆ ಯೋಜಿಸಿದ್ದು, ಕಂಪನಿಯು ತನ್ನ ಪುಣೆ ಶಾಖೆಯನ್ನು ವಿಸ್ತರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಕ್ತಿ ಕೇಂದ್ರವಾದ ಬಿಎಸ್‌ವೈ ಕಾವೇರಿ ನಿವಾಸ; ಶಿಫಾರಸು ಮಾಡುವಂತೆ ಒತ್ತಡ
ಈ ಕುರಿತಾಗಿ ಪ್ರತಿಕ್ರಿಯಿಸಿದ ಫ್ರಾನ್ಸ್ ವ್ಯಾನ್ ಹೌಟನ್, ಬೆಂಗಳೂರಿನಲ್ಲಿರುವ ನಮ್ಮ ಇನ್ನೋವೇಷನ್ ಕೇಂದ್ರದಲ್ಲಿ ಸಂಸ್ಥೆಯ ಹೆಚ್ಚಿನ ಸಾಫ್ಟ್ ವೇರ್ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುತ್ತದೆ. ಚೆನ್ನೈನಲ್ಲಿ ನಮ್ಮ ಜಾಗತಿಕ ವ್ಯಾಪಾರ ಸೇವೆಗಳ ಕೇಂದ್ರವನ್ನು ವಿಸ್ತರಿಸುತ್ತಿದ್ದೇವೆ. ಭಾರತದಲ್ಲಿ ಫಿಲಿಪ್ಸ್ ಸಂಸ‍್ಥೆ ಪ್ರಬಲವಾಗಿ ಮುನ್ನಡೆಯುತ್ತಿದೆ. ಕನಿಷ್ಠ 1500 ಮಂದಿಯನ್ನು ಸಂಸ್ಥೆಯ ಭಾರತದ ಶಾಖೆಯ ವಿವಿಧ ಹುದ್ದೆಗಳಿಗೆ ನೇಮಿಸಿಕೊಳ್ಳುವ ಯೋಜನೆಯಲ್ಲಿ ಸಂಸ್ಥೆಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಸಂಸ್ಥೆ ಭಾರತದಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಿದ್ದು, ಭಾರತದಲ್ಲಿ ಸಂಸ್ಥೆಯನ್ನು ಕ್ರಮೇಣ ವಿಸ್ತರಿಸುವ ಯೋಜನೆಯನ್ನೂ ಕೂಡ ಹೊಂದಿದೆ. ಭಾರತದಲ್ಲಿನ ‘ಪ್ರತಿಭಾವಂತ ಯಂಗ್ ಮೈಂಡ್’ ಗಳನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಭಾರತದಲ್ಲಿ ಹೆಚ್ಚಿನ ಸ್ಥಳೀಯ ಉದ್ಪಾದನೆಯನ್ನು ಮಾಡುವುದಕ್ಕೆ ಸಂಸ್ಥೆ ಕಾರ್ಯೋನ್ಮುಖವಾಗುತ್ತದೆ. ಸ್ಥಳೀಯ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆಯನ್ನು ಸಂಸ್ಥೆ ನೀಡಲಿದೆ ಎಂದಿದ್ದಾರೆ.
ಇದನ್ನೂ ಓದಿ : ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ