Advertisement
ಆಸ್ಟ್ರೇಲಿಯ ಹಲವಾರು ಪ್ರಸಿದ್ಧ ಕ್ರಿಕೆಟ್ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ನೀಡಿದೆ. ಉದಾಹರಣೆಗೆ ಡಾನ್ ಬ್ರಾಡ್ಮನ್, ಡೇವಿಡ್ ಬೂನ್, ಜೆಫ್ ಥಾಮ್ಸನ್, ಅಲೆನ್ ಬಾರ್ಡರ್, ಸ್ಟೀವ್ ವಾ, ಮಾರ್ಕ್ ವಾ, ಶೇನ್ ವಾರ್ನ್, ಗ್ಲೇನ್ ಮೆಗ್ರಾತ್, ರಿಕಿ ಪಾಂಟಿಂಗ್, ಆಡಂ ಗಿಲ್‌ಕ್ರಿಸ್ಟ್, ಬ್ರೆಟ್ ಲೀ, ಮೈಕಲ್ ಬೇವನ್, ಡೇವಿಡ್ ವಾರ್ನರ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
Related Articles
Advertisement
ಫಿಲಿಪ್ ಹ್ಯೂಸ್ ಮ್ಯಾಕ್ಸ್‌ವಿಲ್ಲೆ 12ನೇ ವಯಸ್ಸಿನಯೇ ಎ-ಗ್ರೇಡ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಫಿಲಿಪ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅಜೇಯ 141 ಬಾರಿಸಿದ್ದರು. ಅನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿ 26 ಟೆಸ್ಟ್ ಪಂದ್ಯಗಳಲ್ಲಿ 32.66ರ ಸರಾಸರಿಯಲ್ಲಿ 1,535 ರನ್, 25 ಏಕದಿನ ಪಂದ್ಯಗಳಲ್ಲಿ 35.91ರ ಸರಾಸರಿಯಲ್ಲಿ 826 ರನ್ ಗಳಿಸಿದ ಫಿಲಿಪ್ ಹ್ಯೂಸ್ ಸಣ್ಣ ವಯಸ್ಸಿನಲ್ಲಿಯೇ ವಿಧಿಯ ಆಟದಿಂದಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಫಿಲಿಪ್ ಹ್ಯೂಸ್ ಅವರ ದೇಶೀಯ ಮತ್ತು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಉತ್ತಮ ಪ್ರದರ್ಶನಗಳಿಗಾಗಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದರು. ಅವರು 2007ರಲ್ಲಿ ನ್ಯೂ ಸೌತ್ ವೇಲ್ಸ್ ರೈಸಿಂಗ್ ಸ್ಟಾರ್‌ಪ್ರಶಸ್ತಿ, 2009ರಲ್ಲಿ ಬ್ರಾಡ್ಮನ್ ವರ್ಷದ ಯುವ ಕ್ರಿಕೆಟಿಗ, 2008-09ರಲ್ಲಿ ವರ್ಷದ ಶೆಫೀಲ್ಡ್ ಶೀಲ್ಡ್ ಕ್ರಿಕೆಟರ್ ಮತ್ತು 2012-13ರಲ್ಲಿ ವರ್ಷದ ದೇಶೀಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫಿಲಿಪ್ ಹ್ಯೂಸ್ 2014ರ ನವೆಂಬರ್ 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಂದರ್ಭದಲ್ಲಿ ಸೀನ್ ಅಬಾಟ್ ಎಸೆದ ಬೌನ್ಸರ್‌ನಿಂದ ಹ್ಯೂಸ್ ಕುತ್ತಿಗೆಗೆ ತಾಗಿದ ಚೆಂಡಿನಿಂದಾಗಿ ಸಬ್‌ಅರಾಕ್ನಾಯಿಡ್ ರಕ್ತಸ್ರಾವಕ್ಕೆ ಕಾರಣವಾಯಿತು. ತತ್‌ಕ್ಷಣ ಅವರನ್ನು ಸಿಡ್ನಿಯ ಸೈಂಟ್ ವಿನ್ಸೆಂಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಆದರೆ ನವೆಂಬರ್ 27ರಂದು ಇಹಲೋಕ ತ್ಯಜಿಸಿದರು. ಫಿಲಿಪ್ ಹ್ಯೂಸ್ ಸಣ್ಣ ವಯಸ್ಸಿನಲ್ಲಿಯೆ ಜಗತ್ತು ತೊರೆದರು, ಕ್ರಿಕೆಟ್ ಜಗತ್ತಿನಲ್ಲಿ ಸದಾ ಅಮರಾಗಿದ್ದಾರೆ.
ರಾಸುಮ ಭಟ್
ಕುವೆಂಪು ವಿವಿ