Advertisement

‘ಮೌಲ್ವಿಗಳು ನಮಗಿಂತ ಶ್ರೇಷ್ಠರು| PhD,MA ಗಳಿಗೆ ಬೆಲೆ ಇಲ್ಲ’ಎಂದ ತಾಲಿಬಾನ್ ಶಿಕ್ಷಣ ಸಚಿವ 

09:36 PM Sep 08, 2021 | Team Udayavani |

ಕಾಬೂಲ್ : ಅಫ್ಘಾನಿಸ್ತಾನ್‍ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲಿಬಾನ್ ಸಾಕಷ್ಟು ವಿಚಾರಗಳಿಂದ ವಿಶ್ವದ ಗಮನ ಸೆಳೆಯುತ್ತಿದೆ. ಷರಿಯಾ ಕಾನೂನಿನ ನೆಪದಡಿ ಮಹಿಳೆಯರ ಮೇಲೆ ಅವರು ನಡೆಸುತ್ತಿರುವ ಕ್ರೌರ್ಯ ಒಂದೆಡೆಯಾದರೆ ತಾಲಿಬಾನ್ ಉಗ್ರರು ಜಾರಿ ಮಾಡುತ್ತಿರುವ ಹೊಸ ಕಾನೂನುಗಳು ಹಾಗೂ ಅವರು ನೀಡುತ್ತಿರುವ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸ ಮಾಡಿಕೊಡುತ್ತಿವೆ. ಇದೀಗ ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವ ಶೇಖ್ ಮೌಲ್ವಿ ನೂರುಲ್ಹಾ ಮುನಿರ್ ನೀಡಿರುವ ಹೇಳಿಕೆ ಗಮನ ಸೆಳೆಯುತ್ತಿದೆ.

Advertisement

ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ನೂರುಲ್ಹಾ, ಸ್ನಾತಕೋತ್ತರ ಪದವಿಗಳ ಬಗ್ಗೆ ಕೀಳಾಗಿ ಮಾತಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪಿಎಚ್‍ಡಿ ಹಾಗೂ ಎಂಎ ಪದವಿಗಳಿಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವುಗಳಿಗೆ ಇಲ್ಲಿ ಮೌಲ್ಯವಿಲ್ಲ. ನಮ್ಮಲ್ಲಿರುವ ಮೌಲ್ವಿಗಳು ಯಾವುದೇ ರೀತಿಯ ಪದವಿಗಳನ್ನು ಹೊಂದಿಲ್ಲ. ಆದರೂ ಅವರು ಮೋಸ್ಟ್ ಪವರ್ ಫುಲ್ ಹಾಗೂ ನಮಗೆಲ್ಲರಿಗಿಂತಲೂ ಶ್ರೇಷ್ಠರಾಗಿದ್ದಾರೆ ಎಂದು ಹೇಳಿದ್ದಾರೆ ಅಲ್ಲಿಯ ಶಿಕ್ಷಣ ಸಚಿವರು.

ಪ್ರಸ್ತುತ ದಿನಗಳಲ್ಲಿ ಪಿಎಚ್‍ಡಿ ಹಾಗೂ ಮಾಸ್ಟರ್ ಡಿಗ್ರಿಗಳಿಗೆ ಬೆಲೆ ಇಲ್ಲ. ಮೌಲ್ವಿಗಳು ಹಾಗೂ ತಾಲಿಬಾನ್ ನಾಯಕರನ್ನು ನೀವು ನೋಡಬಹುದು. ಅವರು ಯಾರೂ ಇಂತಹ ಡಿಗ್ರಿಗಳು, ಅಷ್ಟೇ ಏಕೆ ಹೈಸ್ಕೂಲ್‍ ಶಿಕ್ಷಣವನ್ನೂ ಮುಗಿಸಿಲ್ಲ. ಆದರೂ ನಮಗೆಲ್ಲರಿಗಿಂತ ಅವರು ಶ್ರೇಷ್ಠರೆನ್ನಿಸಿಕೊಂಡಿದ್ದಾರೆ. ಹಾಗೂ ಸಮಾಜದಲ್ಲಿ ಹೆಚ್ಚು ಪವರ್ ಫುಲ್ ವ್ಯಕ್ತಿಗಳಾಗಿದ್ದಾರೆ ಎಂದು ನೂರುಲ್ಹಾ ಹೇಳಿದ್ದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಇನ್ನು ಅಫ್ಘಾನಿಸ್ತಾನದಲ್ಲಿ ತರಗತಿಗಳನ್ನು ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ವಿಭಾಗಿಸಿದ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಯುವತಿಯರಿಗೆ ಪುರುಷ ಶಿಕ್ಷಕರ ಬೋಧನೆ ಮಾಡದಂತೆ ಆದೇಶವನ್ನೂ ತಾಲಿಬಾನ್ ಉಗ್ರರು ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next