Advertisement

ಮಾಲತಿ ಜಿ. ನಾಯಕ್‌ ಅವರಿಗೆ ಪಿ.ಹೆಚ್‌ ಡಿ ಪದವಿ

01:29 AM Apr 27, 2017 | Team Udayavani |

ಉಡುಪಿ: ಮಣಿಪಾಲದ ನರ್ಸಿಂಗ್‌ ಕಾಲೇಜಿನಲ್ಲಿ ಅಸಿಸ್ಟಂಟ್‌ ಪ್ರೊಫೆಸರ್‌ (ಸೀನಿಯರ್‌ ಸ್ಕೇಲ್‌) ಆಗಿರುವ ಶ್ರೀಮತಿ ಮಾಲತಿ ಜಿ. ನಾಯಕ್‌ ಅವರು ಮಣಿಪಾಲದ ನರ್ಸಿಂಗ್‌ ಕಾಲೇಜಿನ ಡೀನ್‌ ಆಗಿರುವ ಡಾ. ಆನಿಸ್‌ ಜಾರ್ಜ್‌ ಮತ್ತು ಕೆ.ಎಂ.ಸಿ. ಮಣಿಪಾಲದ ರೇಡಿಯೋಥೆರಪಿ ಹಾಗೂ ಆಂಕಾಲಜಿ ವಿಭಾಗದಲ್ಲಿ ಪ್ರೊಫೆಸರ್‌ ಆಗಿರುವ ಡಾ. ಎಂ.ಎಸ್‌. ವಿದ್ಯಾಸಾಗರ್‌ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಶಧನಾ ಪ್ರಬಂಧ “ಎಫೆಕ್ಟ್ ಆಫ್ ಪರ್ಸಿವ್ಡ್ ಬ್ಯಾರಿಯರ್ಸ್‌ ಟು ಸಿಂಟಮ್ ಮ್ಯಾನೇಜ್‌ಮೆಂಟ್‌ ಆನ್‌ ಕ್ವಾಲಿಟಿ ಆಫ್ ಲೈಫ್ ಆಂಡ್‌ ದಿ ಎಫೆಕ್ಟಿವ್‌ನೆಸ್‌ ಆಫ್ ಎ ಮಲ್ಟಿಕಾಂಪೊನೆಂಟ್‌ ಇಂಟರ್‌ವೆನ್ಸನ್‌ ಎಮಂಗ್‌ ದಿ ಕ್ಯಾನ್ಸರ್‌ ಪೇಷಂಟ್ಸ್‌ ಇನ್‌ ಸೆಲೆಕ್ಟೆಡ್‌ ಕ್ಯಾನ್ಸರ್‌ ಹಾಸ್ಪಿಟಲ್ಸ್‌ ಆಫ್ ಕರ್ನಾಟಕ ಸ್ಟೇಟ್‌’ (Effect of perceived barriers to symptom management on Quality of Life (QOL) and the effectiveness of a multicomponent intervention among the cancer patients in selected cancer hospitals of Karnataka ) ಇದಕ್ಕೆ ಮಣಿಪಾಲ ವಿಶ್ವವಿದ್ಯಾನಿಲಯವು ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. ಇವರು ಹಿರೇಬೆಟ್ಟು ಗ್ರಾಮದ ದೇವಸ್‌ ಬೈಲಿನ ಗಣಪತಿ ನಾಯಕ್‌ ಅವರ ಪತ್ನಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next