ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ 2ನೇ ಹಂತದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಸರಕಾರದ ನಿರ್ದೇಶನದಂತೆ ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದೆ.
ಈ ಸುತ್ತಿನಲ್ಲಿ ಮೊದಲ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿದರುವ, ರದ್ದುಪಡಿಸಿಕೊಂಡಿರುವ ಅಥವಾ ಹೊಸದಾಗಿ ಸೇರ್ಪಡೆಯಾಗಿರುವ ಸೀಟುಗಳು ಇದ್ದಲ್ಲಿ ಅಂತಹ ಸೀಟುಗಳನ್ನು ಹಂಚಿಕೆಗೆ ಪರಿಗಣಿಸಲಾಗುತ್ತದೆ.
ಅಖೀಲ ಭಾರತ ಕೋಟಾದಡಿ ಹಂಚಿಕೆಯಾಗದೆ ರಾಜ್ಯಕ್ಕೆ ವಾಪಸ್ ಆಗಿರುವ ಸೀಟುಗಳಿಗೆ ಹೊಸದಾಗಿ ಸೀಟ್ ಮ್ಯಾಟ್ರಿಕ್ ನೀಡಲಾಗಿದೆ. ಇದರಲ್ಲಿ 188 ವೈದ್ಯಕೀಯ, 1 ಡಿಪ್ಲೊಮಾ ಹಾಗೂ 2 ದಂತ ವೈದ್ಯಕೀಯ ಸೀಟು ಸೇರಿಕೊಂಡಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಅಭ್ಯರ್ಥಿಗಳು ಜುಲೈ 9ರ ಬೆಳಗ್ಗೆ 11 ಗಂಟೆಯವರೆಗೆ ಇಚ್ಛೆ ಅಥವಾ ಆಯ್ಕೆ ದಾಖಲಿಸಬಹುದು. ಎರಡನೇ ಸುತ್ತಿಗೆ ಸಂಬಂಧಿಸಿದಂತೆ ಒಟ್ಟಾರೆ ಲಭ್ಯವಿರುವ ಸೀಟುಗಳ ಮಾಹಿತಿ, ಸೂಚನೆ ಹಾಗೂ ವಿವರವಾದ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್
//kea.kar.nic.in ನಲ್ಲಿ ಪ್ರಕಟಿಸಲಾಗಿದೆ.