Advertisement

PG ವೈದ್ಯಕೀಯ: ನಾಳೆಯಿಂದ ಪ್ರವೇಶ ಪ್ರಕ್ರಿಯೆ

11:17 PM Oct 07, 2023 | Team Udayavani |

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಫ‌ಲಿತಾಂಶ ಪ್ರಕಟಿಸಿದ್ದು, ಅ.9ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕರ್ನಾಟಕ ಪರೀûಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿ¨ªಾರೆ.

Advertisement

ಸೀಟು ಸಿಕ್ಕಿರುವ ಅಭ್ಯರ್ಥಿಗಳು ಅ.9ರಂದು ಬೆಳಗ್ಗೆ 9ರಿಂದ ಅ.10ರ ರಾತ್ರಿ 8ರ ವರೆಗೆ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಶುಲ್ಕ ಪಾವತಿಸಬಹುದು. ಶುಲ್ಕ ಪಾವತಿಸಲು ಅ.11 ಕೊನೇ ದಿನ. ಕ್ಲಾಸ್‌- “ವೈ’ ಅಭ್ಯರ್ಥಿಗಳು ಶುಲ್ಕ ಪಾವತಿ ಬಳಿಕ ಮೂಲ ದಾಖಲೆಗಳನ್ನು ಕೆಇಎ ಕಚೇರಿಗೆ ಸಲ್ಲಿಸಬೇಕು. ಶುಲ್ಕ ಪಾವತಿ ಮತ್ತು ಮೂಲ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅ.12ರಂದು ಕಾಲೇಜಿಗೆ ವರದಿ ಮಾಡಿಕೊಳ್ಳಲು ಕೊನೇ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next