Advertisement

ಮುಂದಿನ ವಾರದಿಂದ ಕೋವಿಡ್‌ ಮಾತ್ರೆ ಲಭ್ಯ?

11:42 AM Apr 24, 2022 | Team Udayavani |

ಹೊಸದಿಲ್ಲಿ: ಕೊರೊನಾ ಲಸಿಕೆ ತಯಾರಿಸು­ತ್ತಿರುವ ಫೈಜರ್‌ ಕಂಪೆನಿಯ “ಪಾಕ್ಸ್‌ ಲೋವಿಡ್‌’ ಕೊರೊನಾ ನಿರೋಧಕ ಮಾತ್ರೆ ಮುಂದಿನ ವಾರದಿಂದ ಭಾರತದಲ್ಲಿ ಲಭ್ಯ ವಾಗಲಿದೆಯೆಂದು ಭಾರತದಲ್ಲಿ ಈ ಮಾತ್ರೆ ತಯಾರಿಸಲಿರುವ “ಹೆಟೆರೋ’ ಕಂಪೆನಿ ಪ್ರಕಟಿಸಿದೆ.

Advertisement

ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿರುವ ಕಾಲದಲ್ಲಿ ಕಂಪನಿಯ ಈ ಶುಭ ಸಮಾಚಾರವನ್ನು ತಿಳಿಸಿದೆ.

ಮಾತ್ರೆಗಳನ್ನು ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಔಷಧ ನಿಯಂತ್ರಣ ಮಹಾ ನಿರ್ದೇಶಕರ ಕಚೇರಿ­ಯಿಂದ (ಡಿಸಿಜಿಐ) ಎ. 21ರಂದು ಪತ್ರ ವೊಂದು ಬಂದಿದ್ದು, ಯಾವುದೇ ಸಂದರ್ಭ­ದಲ್ಲಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಪ್ರಾಯಶಃ ಮುಂದಿನ ವಾರದಿಂದ ಇವು ಲಭ್ಯ­ವಾಗಬ ಹುದು ಎಂದು ಕಂಪೆನಿ ತಿಳಿಸಿದೆ. “ಹೆಟೆರೋ’ ದಂತೆ ಇನ್ನೂ ಕೆಲ ಕಂಪೆನಿಗಳು ಕೊರೊನಾ ನಿರೋಧಕ ಔಷಧ ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಡಿಸಿಜಿಐ ಒಪ್ಪಿಗೆಗಾಗಿ ಕಾಯುತ್ತಿವೆ ಎಂದು ಹೇಳಲಾಗಿದೆ.

ಬೂಸ್ಟರ್‌ ಅಂತರ ಏರಿಕೆ: ಕೊರೊನಾ ಲಸಿಕೆಯ ಬೂಸ್ಟರ್‌ ಡೋಸ್‌ ಅಗತ್ಯತೆ ಮತ್ತು 2ನೇ ಡೋಸ್‌ಗೂ ಬೂಸ್ಟರ್‌ ಡೋಸ್‌ಗೂ ನಡುವಿನ ಅಂತರ ಸೇರಿದಂತೆ ಲಸಿಕೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಜೈವಿಕ ತಂತ್ರ­ಜ್ಞಾನ ಇಲಾಖೆಯ “ಟ್ರಾನ್ಸ್‌ಲೇಶನಲ್‌ ಹೆಲ್ತ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಇನ್‌ಸ್ಟಿ­ಟ್ಯೂಟ್‌’ (ಟಿಎಚ್‌ಎಸ್‌ಟಿಐ) ಅಧ್ಯಯನ ನಡೆಸುತ್ತಿದೆ.|

Advertisement

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

ಆರಂಭದಲ್ಲಿ, “ಕೊವಿಶೀಲ್ಡ್‌’, “ಕೊವ್ಯಾ­ಕ್ಸಿನ್‌’ ಮತ್ತು “ಸುಟ್ನಿಕ್‌-ವಿ’ ಲಸಿಕೆಗಳ 2ನೇ ಡೋಸ್‌ ಪಡೆದ 3,000ಕ್ಕೂ ಹೆಚ್ಚು ಮಂದಿ ಯ ಸ್ಯಾಂಪಲ್‌ಗ‌ಳನ್ನು ಪಡೆದು, 6 ತಿಂಗಳ ಕಾಲ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಈಗ ಅದನ್ನು 6 ತಿಂಗಳ ಬದಲಾಗಿ 9 ತಿಂಗಳಿಗೆ ವಿಸ್ತರಿಸಿ ಅಧ್ಯಯನ ಕೈಗೊಳ್ಳಲಾ­ಗುತ್ತಿದೆ. ಭಾರತದಲ್ಲಿ ನೀಡಲಾ ಗುತ್ತಿರುವ ಲಸಿಕೆಗಳಿಂದ ಉತ್ಪತ್ತಿಯಾಗಿ ರುವ ಪ್ರತಿಕಾಯಗಳು ಎಷ್ಟು ಕಾಲ ವ್ಯಕ್ತಿಯ ದೇಹದಲ್ಲಿರುತ್ತದೆ ಎಂಬುದನ್ನು ಪರಿಶೀಲಿಸುವುದೇ ಇದರ ಉದ್ದೇಶ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಸಾವಿರ ಕೇಸ್‌
ದೆಹಲಿಯಲ್ಲಿ ಶುಕ್ರವಾರ ಬೆಳಗ್ಗೆ ಯಿಂದ ಶನಿವಾರ ಬೆಳಗ್ಗೆ ನಡುವಿನ 24 ಗಂಟೆಗಳ ಅವಧಿಯಲ್ಲಿ 1,094 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 640 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ ಇದೇ ವೇಳೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಮಹಾರಾಷ್ಟ್ರ ದಲ್ಲಿ ಶುಕ್ರವಾರ- ಶನಿವಾರದ ನಡುವೆ 194 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಇದೇ ವರ್ಷ ಮಾರ್ಚ್‌ 24ರ ಅನಂತರ ಕಂಡು ಬಂದ ಗಣನೀಯ ಸಂಖ್ಯೆಯ ಪ್ರಕರಣಗಳು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next