ನವದೆಹಲಿ: ಜ.27ರಿಂದ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹದ ತೆಕ್ಕೆಗೆ ಮರಳಿದೆ. ಈಗ ಅಲ್ಲಿನ ಉದ್ಯೋಗಿಗಳೆಲ್ಲ ಖಾಸಗಿ ಕಂಪನಿ ವ್ಯಾಪ್ತಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಅನ್ವಯಿಸುವ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್ ) ಲಾಭಗಳು ತುಸು ಬದಲಾಗಿವೆ.
ಏರ್ ಇಂಡಿಯಾದಲ್ಲಿ ಪ್ರಸ್ತುತ 7,453 ಉದ್ಯೋಗಿಗಳಿದ್ದಾರೆ. 1925ರ ಭವಿಷ್ಯನಿಧಿ ಕಾಯ್ದೆಯ ಪ್ರಕಾರ ಅವರಿಗೆ ಶೇ.10ರ ಪ್ರಮಾಣದಲ್ಲಿ ಭವಿಷ್ಯ ನಿಧಿ ಸಿಗುತ್ತಿತ್ತು. ಈಗ ಅದು ಶೇ.12ಕ್ಕೇರಿದೆ. ಅಂದರೆ ವೇತನದಲ್ಲಿನ ಶೇ.12ರಷ್ಟು ಮೊತ್ತವನ್ನು ಭವಿಷ್ಯ ನಿಧಿಯನ್ನಾಗಿ ಉದ್ಯೋಗದಾತರು, ಬಾಕಿ ಶೇ.12 ಮೊತ್ತವನ್ನು ಉದ್ಯೋಗಿಗಳು ಭರಿಸುತ್ತಾರೆ. ಜ.13ರಂದು ಏರ್ ಇಂಡಿಯಾ 1952ರ ಇಪಿಎಫ್ ಮತ್ತು ಎಂಪಿ ಕಾಯ್ದೆ ವ್ಯಾಪ್ತಿಗೆ ಬಂದಿರುವುದರಿಂದ ಈ ಬದಲಾವಣೆಯಾಗಿದೆ.
ಇದನ್ನೂ ಓದಿ:ಕುಷ್ಠ ರೋಗದ ವಿರುದ್ಧ ಯುದ್ಧ ಸಾರಿದ್ದ ಬ್ರೈಟ್ ಇಂಡಿಯಾ ಸಂಸ್ಥೆಯ ಸ್ಥಾಪಕ ಕೆ.ವಿ.ಶೆಟ್ಟಿ ನಿಧನ
ಪ್ರಸ್ತುತ ಪ್ರತಿ ಉದ್ಯೋಗಿಗಳು ಕನಿಷ್ಠ 1000 ರೂ. ಪಿಂಚಣಿ ಪಡೆಯುತ್ತಾರೆ. ಹಾಗೆಯೇ ಉದ್ಯೋಗಿಯೊಬ್ಬರು ಮೃತಪಟ್ಟರೆ ಕನಿಷ್ಠ 2.50 ರೂ.ನಿಂದ 7 ಲಕ್ಷ ರೂ.ವರೆಗೆ ವಿಮೆ ಪಡೆಯಲಿದ್ದಾರೆ. ಇದಕ್ಕಾಗಿ ಯಾವುದೇ ಕಂತು ಕಟ್ಟುವ ಅಗತ್ಯವಿಲ್ಲ.
ಹಾಗೆಯೇ ಇನ್ನೊಂದು ವರ್ಷ ಯಾರನ್ನೂ ಕೆಲಸದಿಂದ ಕಿತ್ತೂಗೆಯುವುದಿಲ್ಲ ಎಂದು ಟಾಟಾ ಖಚಿತಪಡಿಸಿದೆ. ಆಗ ತೆಗೆದರೆ ಸ್ವಪ್ರೇರಿತ ನಿವೃತ್ತಿ ಎಂದು ಪರಿಗಣಿಸಿ, ಆ ಪ್ರಕಾರ ಪರಿಹಾರ ನೀಡಲಾಗುತ್ತದೆ.