Advertisement

ಪಿಎಫ್ ಬಡ್ಡಿ ದರ ಶೇ. 8.65ಕ್ಕೆ ಏರಿಕೆ

12:30 AM Feb 22, 2019 | Team Udayavani |

ಹೊಸದಿಲ್ಲಿ: ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರಕಾರ ಖುಷಿ ಸುದ್ದಿ ನೀಡಿದೆ. ಕಾರ್ಮಿಕರ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ. 0.10ರಷ್ಟು ಏರಿಕೆ ಮಾಡಲಾಗಿದೆ. ಈ ಮೂಲಕ 2018-19ರ ವಿತ್ತ ವರ್ಷದಿಂದಲೇ ಜಾರಿಯಾಗುವಂತೆ ಶೇ. 8.65ರ ಬಡ್ಡಿದರ ಸಿಗಲಿದೆ. ಕಳೆದ ಮೂರು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಬಡ್ಡಿ ದರ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ದೇಶದ 6 ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಪ್ರಸ್ತುತ ವಿತ್ತ ವರ್ಷದಲ್ಲಿ ಬಡ್ಡಿ ದರ ಏರಿಕೆಗೆ ಕಾರ್ಮಿಕರ ಬಡ್ಡಿ ನಿಧಿ ಸಂಸ್ಥೆಯ (ಇಪಿಎಫ್ಒ) ಎಲ್ಲ ಸದಸ್ಯರೂ ಸಮ್ಮತಿಸಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next