Advertisement

ಪೆಟ್ರೋಲ್ ದರ ಲೀ.ಗೆ 2.45, ಡೀಸೆಲ್ 2.36 ರೂ. ಹೆಚ್ಚಳ

01:24 AM Jul 07, 2019 | Team Udayavani |

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಇಂಧ ನದ ಮೇಲಿನ ತೆರಿಗೆ ಹೆಚ್ಚಳ ಮಾಡಿದ ಬೆನ್ನಲ್ಲೇ ಶನಿವಾರ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆ ಯಾ ಗಿದೆ. ಪೆಟ್ರೋಲ್ ದರ ಲೀಟರ್‌ಗೆ 2.40 ರೂ. ಹಾಗೂ ಡೀಸೆಲ್ ಲೀ.ಗೆ 2.36 ರೂ. ಏರಿಕೆಯಾಗಿದೆ. ಹೀಗಾಗಿ, ದೆಹಲಿ ಯಲ್ಲಿ ಪೆಟ್ರೋಲ್ ದರ ಲೀ.ಗೆ 72.96 ರೂ. ಆಗಿ ದ್ದರೆ, ಮುಂಬೈನಲ್ಲಿ 78.57 ರೂ. ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿ ಯನ್‌ ಆಯಿಲ್ ಕಾರ್ಪೊ ರೇಷನ್‌ ತಿಳಿ ಸಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣ ವಾಗಿ ಆಯಾ ರಾಜ್ಯ ಗಳಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಬದಲಾವಣೆ ಯಾ ಗಲಿದೆ. ರಾಜಸ್ಥಾನದಲ್ಲಿ ವ್ಯಾಟ್ ಹೆಚ್ಚಿ ರುವ ಕಾರಣ, ಅಲ್ಲಿ ದರ 5 ರೂ.ವರೆಗೆ ಏರಿಕೆಯಾಗಿದೆ. 2014ರ ಬಳಿಕ ಈವರೆಗೆ ಪೆಟ್ರೋಲ್- ಡೀಸೆಲ್ ಎಕ್ಸೈಸ್‌ ಶುಲ್ಕ ಕೇವಲ ಎರಡು ಬಾರಿ ಇಳಿಕೆಯಾಗಿದ್ದು, ಒಟ್ಟು 10 ಬಾರಿ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next