Advertisement

ಮುಂಬಯಿನಲ್ಲಿ  ಪೆಟ್ರೋಲ್‌ ಬೆಲೆ  80 ರೂ.

06:15 AM Mar 06, 2018 | Team Udayavani |

ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಐದು ದಿನಗಳಿಂದ ಈಚೆಗೆ ಪ್ರತಿ ಲೀಟರ್‌ ಪೆಟ್ರೋಲ್‌ಗೆ 80 ರೂ.ಗೆ ತಲುಪಿದೆ. ಡೀಸೆಲ್‌ ದರವೂ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಕಚ್ಚಾ ತೈಲದ ದರ ಹೆಚ್ಚಳವೇ ಇದಕ್ಕೆ ಕಾರಣ. ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (ಐಓಸಿ) ನ ವೆಬ್‌ಸೈಟ್‌ನಲ್ಲಿ ಮಾ.5ರಂದು ಪ್ರಕಟವಾಗಿರುವ ದರಪಟ್ಟಿ ಪ್ರಕಾರ, ನವದಿಲ್ಲಿಯಲ್ಲಿ ಪ್ರತಿ ಲೀ. ಪೆಟ್ರೋಲ್‌ಗೆ 72.32 ರೂ., ಕೋಲ್ಕತಾದಲ್ಲಿ 75.06 ರೂ., ಮುಂಬಯಿನಲ್ಲಿ 80.19 ರೂ., ಚೆನ್ನೈನಲ್ಲಿ 75 ರೂ. ಆಗಿದೆ.  

Advertisement

ಇನ್ನು ಲೀ. ಡೀಸೆಲ್‌ಗೆ ದಿಲ್ಲಿಯಲ್ಲಿ 62.89 ರೂ., ಕೋಲ್ಕತಾದಲ್ಲಿ 65.58 ರೂ., ಮುಂಬಯಿನಲ್ಲಿ 66.97 ರೂ., ಚೆನ್ನೈನಲ್ಲಿ 66.31 ರೂ., ಆಗಿದೆ. ಸೋಮವಾರ ಪೆಟ್ರೋಲ್‌ ದರ 6 ಪೈಸೆ ಮತ್ತು ಡೀಸೆಲ್‌ ದರ 1 ಪೈಸೆ ಹೆಚ್ಚಾಗಿದೆ. ಜ.1ರಿಂದ ಈಚೆಗೆ ನಾಲ್ಕು ಮೆಟ್ರೋಗಳಲ್ಲಿ ಪೆಟ್ರೋಲ್‌ ದರ 2.47 ರೂ.ಗಳಿಂದ 2.35 ರೂ.ವರೆಗೆ ಏರಿಕೆಯಾಗಿದೆ. 

ಡೀಸೆಲ್‌ ದರ 3.7 ರೂ.ಗಳಿಂದ 3.48 ರೂ.ಗಳ ವರೆಗೆ ಏರಿಕೆಯಾಗಿದೆ. ವಿಶ್ವ ತೈಲ ಮಾರುಕಟ್ಟೆಯ ಏರಿಳಿತದ ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಗದಿ ಮಾಡುವ ತೆರಿಗೆ, ಡಾಲರ್‌- ರೂಪಾಯಿ ದರ ನಿರ್ಧಾರ ಕೂಡ ಪ್ರಭಾವ ಬೀರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next