ದೆಹಲಿ: ಎರಡು ತಿಂಗಳ ಬಳಿಕ ಅಂತಾರಾಷ್ಟ್ರೀಯ ತೈಲ ಬೆಲೆ
ಯಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 17 ಪೈಸೆ ಹಾಗೂ ಡೀಸೆಲ್ ಬೆಲೆ 22 ಪೈಸೆ ಜಿಗಿತ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ. 81.06 ರಿಂದ ರೂ. 81.23 ರೂ. ಹಾಗೂ ಡೀಸೆಲ್ ಬೆಲೆ ರೂ. 70.46 ರಿಂದ ರೂ. 70.68 ಗಳಿಗೆ ಪರಿಷ್ಕರಣೆಯಾಗಿದೆ.
ಸೆಪ್ಟೆಂಬರ್ 22ರ ನಂತರ ಪೆಟ್ರೋಲ್ ಬೆಲೆಯಲ್ಲಿ ಇದೇ ಮೊದಲ ಏರಿಕೆಯಾಗಿದ್ದು . ಅಕ್ಟೋಬರ್ 2 ರಿಂದ ಡೀಸೆಲ್ ದರಗಳು ಬದಲಾಗಿರಲಿಲ್ಲ.
ಇನ್ನೂ ಓದಿ:
ಸೋನಿಯಾ ಗಾಂಧಿ ದೆಹಲಿ ತೊರೆಯಬೇಕು, ಚೆನ್ನೈನಲ್ಲಿ ಕೆಲಕಾಲ ವಾಸ? ವೈದ್ಯರ ಸಲಹೆ
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಗಳು ಅಂತರರಾಷ್ಟ್ರೀಯ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪರಿಷ್ಕರಿಸುತ್ತವೆ.
ಮುಂಬೈನಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 87.74 ರೂ.ನಿಂದ 87.92 ರೂ. ಗೆ ಮತ್ತು ಡೀಸೆಲ್ ದರ 76.86 ರೂ.ನಿಂದ 77.11 ರೂ.ಗೆ ಏರಿಸಲಾಗಿದೆ. ಪ್ರಸ್ತುತ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 84.31 ರೂ. ಮತ್ತು ಕೋಲ್ಕತ್ತಾದಲ್ಲಿ 82.79 ರೂ. ಇದೆ. ಡೀಸೆಲ್ ಗೆ ಚೆನ್ನೈನಲ್ಲಿ ಲೀಟರ್ ಗೆ ರೂ. 76.17 ಮತ್ತು ಕೋಲ್ಕತ್ತಾದಲ್ಲಿ 74.24 ರೂ ಇದೆ.