ನವದೆಹಲಿ: ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಿದ್ದು, ಶುಕ್ರವಾರ ಮತ್ತೆ ತಲಾ 35 ಪೈಸೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ ಗೆ 111.09 ರೂ., ಡೀಸೆಲ್‌ಗೆ 101.78 ರೂ. ಆಗಿದೆ. ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ಗೆ 108.80 ರೂ. ಆಗಿದ್ದು, ಡೀಸೆ ಲ್‌ಗೆ 99.63 ರೂ. ಆಗಿದೆ.
ಇದನ್ನೂ ಓದಿ:ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?
ಗುರುವಾರವೂ ತೈಲ ದರ 35 ಪೈಸೆ ಹೆಚ್ಚಳವಾಗಿತ್ತು. ಈ ಮೂಲಕ ಸೆಪ್ಟೆಂಬರ್ ಕೊನೆಯ ವಾರದ ಬಳಿಕ ಈವರೆಗೆ ಪೆಟ್ರೋಲ್ ದರದಲ್ಲಿ ಇದು 14ನೇ ಬಾರಿಯ ಏರಿಕೆಯಾಗಿದ್ದರೆ, ಡೀಸೆಲ್ ದರ 17 ಬಾರಿ ಏರಿಕೆ ಕಂಡಂತಾಗಿದೆ.
ಪಟಾಕಿ ನಿಷೇಧ ನಿರ್ಧಾರ ಮರು ಪರಿಶೀಲಿಸಿ: ಸ್ಟಾಲಿನ್
ಪಟಾಕಿ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿ ದೆಹಲಿ, ಒಡಿಶಾ, ರಾಜಸ್ಥಾನ ಹಾಗೂ ಹರ್ಯಾಣ ಸರ್ಕಾರಗಳು ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸುವಂತೆ ತಮಿಳು ನಾಡು ಸಿಎಂ ಎಂ.ಕೆ. ಸ್ಟಾಲಿನ್ ಮನವಿ ಮಾಡಿದ್ದಾರೆ.
ಪಟಾಕಿಗಳಿಗೆ ಸಂಪೂರ್ಣ ನಿಷೇಧ ಸಮಂಜಸವಲ್ಲ. ಇದು ಪಟಾಕಿ ತಯಾರಿಕಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರಾಜ್ಯದ 8 ಲಕ್ಷ ಕಾರ್ಮಿಕರ ಬದುಕಿನ ಪ್ರಶ್ನೆ. ಪಟಾಕಿಗೆ ನಿಷೇಧ ಹೇರಿ ದರೆ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದೂ ಸ್ಟಾಲಿನ್ ಹೇಳಿದ್ದರೆ. ನಾಲ್ಕೂ ರಾಜ್ಯ ಗಳು ಹೊರಡಿಸಿರುವ ಪಟಾಕಿ ನಿಷೇಧ ಆದೇಶದ ಪ್ರತಿಯನ್ನು ಮಾಧ್ಯಮಗಳ ಮುಂದಿಟ್ಟು ಮಾತ ನಾಡಿದ ಅವರು, ಕೊರೊನಾದಿಂದಾಗಿ ಸಣ್ಣ ಕೈಗಾರಿಕೆ, ಗುಡಿಕೈಗಾರಿಕೆ ನಶಿಸಿ ಹೋಗಿದೆ. ನೀವು
ವಾಯುಮಾಲಿನ್ಯವನ್ನು ಗಮನದಲ್ಲಿಟ್ಟು ಕೊಂಡು ಈ ನಿರ್ಧಾರ ಕೈಗೊಂಡಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಬೇರೆ ರಾಜ್ಯಗಳೂ ನಿಮ್ಮಂತೆಯೇ ನಿರ್ಧಾರ ಕೈಗೊಂಡರೆ, ಇಡೀ ಪಟಾಕಿ ಉದ್ದಿಮೆಯೇ ಸ್ಥಗಿತಗೊಳ್ಳ ತ್ತದೆ. ಹೀಗಾಗಿ ದಯ ವಿಟ್ಟು ನಿಮ್ಮ ನಿರ್ಧಾರ ಮರು ಪರಿಶೀಲಿಸಿ ಎಂದು ಕೋರಿದ್ದಾರೆ.