Advertisement

ಶಿರಸಿಯಲ್ಲಿ ಪೆಟ್ರೋಲ್ ಮತ್ತಷ್ಟು ದುಬಾರಿ

02:34 PM Oct 14, 2021 | Team Udayavani |

ಶಿರಸಿ: ರಾಜ್ಯದಲ್ಲೇ  ಉತ್ತರ ಕನ್ನಡದ ಶಿರಸಿಯಲ್ಲಿ  ತೈಲ ಬೆಲೆ ಗರಿಷ್ಟ ಮೊತ್ತಕ್ಕೆ ಏರಿದೆ.

Advertisement

ನವರಾತ್ರಿಯ ಮಹಾ‌ನವಮಿಯಂದೇ ಪೆಟ್ರೋಲ್ 110 ರೂ. ಹಾಗೂ ಡೀಸೆಲ್ ದರ 100 ರೂ. ದಾಟಿದೆ.

ಈ ವಾರದ ಆರಂಭದಲ್ಲಿ ನೂರು ರೂ ಆಗಿದ್ದ ಡೀಸೆಲ್ ದರ ವಾರಾಂತ್ಯಲ್ಲಿ 1 ರೂ.15 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ದರ‌ ಲೀ.ಗೆ 110.69 ರೂ. ಆಗಿದ್ದರೆ, ಡೀಸೆಲ್ ದರ 101.23 ರೂ. ಆಗಿದೆ. ಇದರಿಂದ ಗ್ರಾಹಕರು‌ ಕಂಗಾಲಾಗಿದ್ದಾರೆ.

ಮಂಗಳೂರಿನಿಂದ ತೈಲ ತರಿಸಲಾಗುತ್ತಿದ್ದು, ಇದರ ಸಾಗಾಟ ವೆಚ್ಚ ಅಧಿಕ ಆಗುವದರಿಂದ ಶಿರಸಿಯಲ್ಲಿ ಅತಿ ಹೆಚ್ಚು ಇಂಧನ ಬೆಲೆ ದಾಖಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next