Advertisement

2ವರ್ಷದಲ್ಲಿ ಗರಿಷ್ಠ ಬೆಲೆ ಹೆಚ್ಚಳ; ಸತತ ಆರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

12:54 PM Dec 07, 2020 | Nagendra Trasi |

ಹೊಸದಿಲ್ಲಿ: ದೇಶದಲ್ಲಿ ತೈಲ ಬೆಲೆಯೇರಿಕೆ ಮುಂದುವರಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಸತತ 6ನೇ ದಿನವೂ ಏರಿಕೆ ಕಂಡು ಪೆಟ್ರೋಲ್‌ ಬೆಲೆ ಲೀ.ಗೆ 83.71 ರೂ.ಗಳಿಗೆ ಮುಟ್ಟಿದೆ. ಸೋಮವಾರ(ಡಿಸೆಂಬರ್ 07, 2020) 30 ಪೈಸೆ ಏರಿಕೆಯಾಗಿದೆ. ಡೀಸೆಲ್‌ ಬೆಲೆ ಲೀ.ಗೆ 29 ಪೈಸೆಗಳಷ್ಟು ಹೆಚ್ಚಿ 73.87ರೂ. ಗೇರಿದೆ.

Advertisement

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀ.ಗೆ 29 ಪೈಸೆ ಏರಿ 86.20 ರೂ.ಗಳಿಗೆ ಮುಟ್ಟಿದ್ದರೆ, ಡೀಸೆಲ್‌ ಬೆಲೆ ಲೀ.ಗೆ 30 ಪೈಸೆ ಹೆಚ್ಚಿ 78.03 ರೂ.ಗಳಿಗೆ ತಲುಪಿದೆ. ಮುಂಬಯಿಯಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ಗೆ 90 ರೂ. ದಾಟಿದ್ದರೆ, ಡೀಸೆಲ್‌ಗೆ 80 ರೂ.ಗಳಿಗೆ ಹೆಚ್ಚಿದೆ.

ನ. 20ರ ಬಳಿಕ 14ನೇ ಬಾರಿಗೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಈ 17 ದಿನಗಳ ಅವಧಿಯಲ್ಲಿ ಪೆಟ್ರೋಲ್‌ ಬೆಲೆ 2.35 ರೂ. ಏರಿಕೆಯಾಗಿದ್ದರೆ, ಡೀಸೆಲ್‌ 3.15 ರೂ. ಜಿಗಿದಿದೆ.

ಟ್ವಿಟರ್‌ ಸೆಕ್ಯುರಿಟಿ ಕೀ ತಂತ್ರ
ನ್ಯೂಯಾರ್ಕ್‌: ಹ್ಯಾಕರ್ಸ್‌ಗಳಿಂದ ಬಳಕೆದಾರರ ಖಾತೆ ಸಂರಕ್ಷಿಸಲು ಟ್ವಿಟರ್‌, “ಸೆಕ್ಯುರಿಟಿ ಕೀ ಸಪೋರ್ಟ್‌’ ಸೌಲಭ್ಯ ಕಲ್ಪಿಸಿದೆ. ಹ್ಯಾಕರ್ಸ್‌ಗಳಿಗೆ ಒಂದು ವೇಳೆ ಯೂಸರ್ನೇಮ್‌ ಮತ್ತು ಪಾಸ್‌ವರ್ಡ್‌ ಸಿಕ್ಕರೂ, ಖಾತೆ ಪ್ರವೇಶಿಸುವುದು ಇನ್ನಮುಂದೆ ಅಸಾಧ್ಯ.

ಟ್ವಿಟರ್‌ ಸಂಸ್ಥೆಯ ಸಿಬಂದಿ ಖಾತೆಗಳು ಈ ಹಿಂದೆ ಹಲವು ಬಾರಿ ಹ್ಯಾಕ್‌ ಆಗಿದ್ದವು. ಇದನ್ನು ತಡೆಯಲು 2018ರಲ್ಲಿ ಟ್ವಿಟರ್‌, ಸಿಬಂದಿ ಖಾತೆಗಳಿಗೆ “ಸೆಕ್ಯುರಿಟಿ ಕೀ ಸಪೋರ್ಟ್‌’ ಅಳವಡಿಸಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನು ಎಲ್ಲ ಬಳಕೆದಾರರಿಗೆ ವಿಸ್ತರಿಸಲು ಟ್ವಿಟರ್‌ ಮುಂದಾಗಿದೆ.

Advertisement

“ಸೆಕ್ಯುರಿಟಿ ಕೀ ಸೆಟ್‌ಅಪ್‌ ಬಳಸಿ, ಬಳಕೆದಾರರು ತಮ್ಮ ಖಾತೆಯನ್ನು ಸುದೀರ್ಘ‌ವಾಗಿ ಸಂರಕ್ಷಿಸಿಟ್ಟುಕೊಳ್ಳಬಹುದು’ ಎಂದು ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next