ನವದೆಹಲಿ: ಚೀನಾ ಸೇರಿದಂತೆ ಜಾಗತಿಕವಾಗಿ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಶನಿವಾರ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ.
ತೈಲ ಬೆಲೆ ಇಳಿಕೆಯ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 27 ಪೈಸೆಯಷ್ಟು ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 30 ಪೈಸೆ ಇಳಿಕೆಯಾಗಿರುವುದಾಗಿ ವರದಿ ವಿವರಿಸಿದೆ.
ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 74.16 ರೂಪಾಯಿ, ಮುಂಬೈಯಲ್ಲಿ ಲೀಟರ್ ಗೆ 79.76 ರೂಪಾಯಿ, ಕೋಲ್ಕತಾದಲ್ಲಿ 76.77 ರೂಪಾಯಿ ಹಾಗೂ ಚೆನ್ನೈಯಲ್ಲಿ 77.03 ರೂಪಾಯಿಗೆ ಇಳಿಕೆಯಾಗಿರುವುದಾಗಿ ತಿಳಿಸಿದೆ.
ಅದೇ ರೀತಿ ದಿಲ್ಲಿಯಲ್ಲಿ ಡೀಸೆಲ್ ಲೀಟರ್ ಬೆಲೆ 67.31 ರೂಪಾಯಿ, ಮುಂಬೈನಲ್ಲಿ 70.56 ರೂಪಾಯಿ. ಕೋಲ್ಕತಾದಲ್ಲಿ 69.67 ರೂಪಾಯಿ ಹಾಗೂ ಚೆನ್ನೈನಲ್ಲಿ 71.11 ರೂಪಾಯಿಗೆ ಇಳಿಕೆಯಾಗಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ವೆಬ್ ಸೈಟ್ ಹೇಳಿದೆ.
ಬ್ರೆಂಟ್ ಕಚ್ಛಾ ತೈಲ ಬ್ಯಾರೆಲ್ ಬೆಲೆ ಶನಿವಾರ 60.56 ಡಾಲರ್ ನಷ್ಟಾಗಿದೆ. ಕಳೆದ ವಾರ ಬ್ರೆಂಟ್ ಕಚ್ಛಾ ತೈಲ ಬ್ಯಾರೆಲ್ ಗೆ 62.07 ಡಾಲರ್ ಇದ್ದಿದ್ದು, ಇದೀಗ 2.43 ಡಾಲರ್ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.