Advertisement

ಪೆಟ್ರೋಲ್‌, ಡೀಸೆಲ್‌ ದರ 12, 14 ಪೈಸೆ ಇಳಿಕೆ

10:08 AM Mar 16, 2020 | sudhir |

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಭಾನುವಾರ ಪ್ರತಿ ಲೀಟರ್‌ಗೆ ಕ್ರಮವಾಗಿ 12 ಪೈಸೆ ಹಾಗೂ 14 ಪೈಸೆ ಇಳಿಕೆಯಾಗಿದೆ. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ನವದೆಹಲಿಯಲ್ಲಿ 69.75 ರೂ., ಪ್ರತಿ ಲೀಟರ್‌ ಡೀಸೆಲ್‌ 62.44 ರೂ. ಆಗಿದೆ. ಶನಿವಾರ ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕ 3 ರೂ. ಏರಿಕೆ ಮಾಡಿತ್ತು. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಶೇ.30ರ ವರೆಗೆ ಇಳಿಕೆಯಾಗಿದ್ದರೂ, ಗ್ರಾಹಕರಿಗೆ ಅದರ ಲಾಭ ಸಿಕ್ಕಿಲ್ಲ ಎಂಬ ಕೊರಗಿನ ನಡುವೆ ತೈಲ ಕಂಪನಿಗಳು ದರ ಇಳಿಕೆ ಮಾಡಿವೆ.

Advertisement

ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದರಿಂದ ಈ ಅಲ್ಪ ಇಳಿಕೆ ಮಾಡಲಾಗಿದೆ ಎಂದು ತೈಲ ಕಂಪನಿಗಳು ಭಾನುವಾರ ಹೇಳಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next