Advertisement

ನಿರಂತರ ಮೂರನೇ ದಿನ ಇಳಿಕೆ : ಪೆಟ್ರೋಲ್‌ 6 ಪೈಸೆ, ಡೀಸಿಲ್‌ 5 ಪೈಸೆ

10:49 AM Jun 01, 2018 | Team Udayavani |

ಹೊಸದಿಲ್ಲಿ : ಪೆಟ್ರೋಲ್‌ ಮತ್ತು ಡೀಸಿಲ್‌ ದರಗಳು ನಿರಂತರ ಮೂರನೇ ದಿನವಾಗಿ ಇಂದು ಶುಕ್ರವಾರ ಕೂಡ ಇಳಿದಿವೆ. 

Advertisement

ಪೆಟ್ರೋಲ್‌ ಲೀಟರ್‌ ದರ 6 ಪೈಸೆ ಮತ್ತು ಡೀಸಿಲ್‌ ಲೀಟರ್‌ ದರ 5 ಪೈಸೆಯಷ್ಟು ದಿಲ್ಲಿಯಲ್ಲಿ ಇಳಿದಿವೆ. ಹಾಗಾಗಿ ದಿಲ್ಲಿಯಲ್ಲಿ ಇಂದು ಪೆಟ್ರೋಲ್‌ ಲೀಟರ್‌ ಬೆಲೆ 78.29 ರೂ. ಮತ್ತು ಡೀಸಿಲ್‌ ಲೀಟರ್‌ ಬೆಲೆ 69.20 ರೂ.ಗೆ ಇಳಿದಿದೆ.

ಇಂದಿನ ಪರಿಷ್ಕೃತ ಪೆಟ್ರೋಲ್‌ ದರ ಲೀಟರಿಗೆ ಕೋಲ್ಕತದಲ್ಲಿ 89.92, ಮುಂಬಯಿಯಲ್ಲಿ 86.10 ಮತ್ತು ಚೆನ್ನೈನಲ್ಲಿ 81.28 ರೂ. ಇದೇ ಅನುಕ್ರಮದಲ್ಲಿ ಡೀಸಿಲ್‌ ಲೀಟರ್‌ ಬೆಲೆ 71.75, 73.67 ಮತ್ತು 73.06 ರೂ ಇದೆ. 

ನಿರಂತರ 16 ದಿನಗಳ ಏರಿಕೆಯನ್ನು ಕಾಣುತ್ತಲೆ ಬಂದ ಇಂಧನ ಬೆಲೆ ಮೂರು ದಿನಗಳ ಹಿಂದೆ ಹಾಸ್ಯಾಸ್ಪದವಾಗಿ 1 ಪೈಸೆಯ ಇಳಿಕೆಯನ್ನು ಕಂಡಿತ್ತು. ಆ ಬಳಿಕ ನಿನ್ನೆ ಗುರುವಾರ ಪೆಟ್ರೋಲ್‌ಗೆ 7 ಪೈಸೆ ಮತ್ತು ಡೀಸಿಲ್‌ಗೆ 5 ಪೈಸೆಯ ಕಡಿತ ಕಂಡುಬಂದಿತ್ತು. 

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಮಾರು 16 ದಿನಗಳ ಕಾಲ ಪೆಟ್ರೋಲ್‌, ಡೀಸಿಲ್‌ ದೈನಂದಿನ ದರ ಪರಿಷ್ಕರಣೆಯನ್ನು ತಡೆ ಹಿಡಿಯಲಾಗತ್ತು. ಅದಾಗಿ ಮೇ 14ರಂದು ಮತ್ತೆ ಆರಂಭಗೊಂಡ ಈ ಪ್ರಕ್ರಿಯೆಯಲ್ಲಿ ತೈಲೋತ್ಪನ್ನಗಳು ನಿರಂತರ 16 ದಿನಗಳ ಏರಿಕೆಯನ್ನು ಕಾಣುತ್ತಲೇ ಬಂದು ದೇಶಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next