ಮುಂಬೈ: ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿಕೂಟ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ 5 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲಿನ 3 ರೂ. ವ್ಯಾಟ್ ಅನ್ನು ಇಳಿಕೆ ಮಾಡಿ ಗುರುವಾರ ಆದೇಶಿಸಿದೆ.
ಇದರಿಂದ ರಾಜ್ಯ ಸರ್ಕಾರಕ್ಕೆ 6000 ಕೋಟಿ ರೂ. ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ತಿಳಿಸಿದ್ದಾರೆ.
ಜನರ ಅಭಿವೃದ್ಧಿಗೆ ಶಿವಸೇನೆ-ಬಿಜೆಪಿ ಸರ್ಕಾರ ಪಣತೊಟ್ಟಿದ್ದು, ಅದರ ಭಾಗವಾಗಿ ಈ ಬೆಲೆ ಇಳಿಕೆ ಮಾಡಲಾಗಿದೆ ಎಂದು ಡಿಸಿಎಂ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಈವರೆಗೆ ಅಡ್ಡಿಯಾಗಿದ್ದ ಎಲ್ಲ ಅಂಶಗಳನ್ನು ನಿವಾರಿಸಲಾಗಿದೆ. ಭೂಮಿ ಪಡೆಯುವುದು, ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವಿಕೆ ಇದರಲ್ಲಿ ಪ್ರಧಾನವಾದದ್ದು ಎಂದು ಫಡ್ನವೀಸ್ ಹೇಳಿದ್ದಾರೆ.
ಹಿಂದಿನ ಎಂವಿಎ ಸರ್ಕಾರ ಬುಲೆಟ್ ಟ್ರೈನ್ ಯೋಜನೆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.