ನವದೆಹಲಿ : ಪಂಚರಾಜ್ಯಗಳ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದೆ. ದೇಶಾದ್ಯಂತ ಕೋವಿಡ್ ತಾಂಡವವಾಡುತ್ತಿದ್ದು ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದೆ. ಆದ್ರೂ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಇದೀಗ ವಾಹನ ಸವಾರರಿಗೆ ಕಷ್ಟವಾಗಿ ಪರಿಣಮಿಸಿದೆ.
ಕಳೆದ 2 ತಿಂಗಳುಗಳಿಂದ ತೈಲ ಮಾರಾಟ ಕಂಪನಿಗಳಿಗೆ ನಷ್ಟವಾಗಿದ್ದು, ಆ ನಷ್ಟವನ್ನು ವಾಪಸ್ಸು ಪಡೆಯಲು ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂಬ ಮಾತುಕತೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ತೈಲ ಮಾರಾಟ ಕಂಪನಿಗಳು ತೈಲ ಬೆಲೆಯಲ್ಲು ಏರಿಕೆ ಮಾಡುವ ಸಾಧ್ಯತೆ ಇದೆ.
ಮಂಗಳವಾರದಿಂದು ಅಂದ್ರೆ ಇಂದಿನಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ಪ್ರಮುಖ ನಗರಗಳಲ್ಲಿ 12 ರಿಂದ 15 ಪೈಸೆ ಹೆಚ್ಚಳವಾಗಿದೆ. ಆಶ್ಚರ್ಯ ಅಂದ್ರೆ ಎಲ್ಲಾ ನಗರಗಳಲ್ಲಿ 12 ರಿಂದ 18 ಪೈಸೆ ಬೆಲೆ ಹೆಚ್ಚಾದರೆ ಬೆಂಗಳೂರಿನಲ್ಲಿ 24 ಪೈಸೆಯನ್ನು ಏರಿಕೆ ಮಾಡಲಾಗಿದೆ.
ಬೆಲೆ ಏರಿಕೆ ನಂತ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ :
ದೆಹಲಿ – 90.55 (15
ಪೈಸೆ ಏರಿಕೆ)
ಮುಂಬೈ – 96.95 (12
ಪೈಸೆ ಏರಿಕೆ)
ಕೊಲ್ಕತ್ತಾ – 90.76 (14
ಪೈಸೆ ಏರಿಕೆ)
ಬೆಂಗಳೂರು – 93.67 (24
ಪೈಸೆ ಏರಿಕೆ)