ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಷುಲಕ ಕಾರಣಕ್ಕೆ ಗಲಾಟೆ: ವೇಣು ತನ್ನ ಸಂಬಂಧಿ ಜಮೀನಿನಲ್ಲಿ ಸೆಂಟ್ರಿಂಗ್ ಹಾಕುವ ವಸ್ತುಗಳನ್ನು ಇಟ್ಟಿದ್ದು, ಕಿಟ್ಟ ಎನ್ನುವರು ಇದೇ ಜಾಗದಲ್ಲಿ ಕೆಲವು ವಸ್ತುಗಳನ್ನು ಅಡ್ಡ ಹಾಕಿದ್ದಾರೆ. ಈ ವೇಳೆ ವಸ್ತುಗಳನ್ನು ತೆಗೆಯುವ ವಿಚಾರವಾಗಿ ಆಗಸ್ಟ್ 7 ರಂದು ಸಂಜೆ 7 ಗಂಟೆ ಸಮಯದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಘಟನೆಯಲ್ಲಿ ಮಧ್ಯ ಪ್ರವೇಶಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಎಂಬುವರು ತನ್ನ ಸಹಚರರೊಂದಿಗೆ ವೇಣುಗೋಪಾಲ್ ಮನೆಗೆ ನುಗ್ಗಿ ಗಲಾಟೆ ಮಾಡಿ ,ಮನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ದಾಳಿ ವೇಳೆ ಎರಡು ಗುಂಪಿನ ಸದಸ್ಯರಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ದ್ವೇಷದ ದಾಳಿ: ಇವೆಲ್ಲದರ ಮಧ್ಯೆ ಗುರುವಾರ ರಾತ್ರಿ ಸದರಿ ವಿಷಯದಲ್ಲಿ ಭಾಗಿಯಾದವರು ವೇಣು ಮನೆ ಮೇಲೆ ದಾಳಿ ನಡೆಸಿದ್ದು, ಪೆಟ್ರೋಲ್ ಸುರಿದು ಕೊಲೆ ಪ್ರಯತ್ನ ಮಾಡಿದ್ದಾರೆ ಎಂದು ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಕುಟುಂಬದ ಸದಸ್ಯೆ ಅನಿತಾ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಹೇಳಿಕೊಂಡಿದ್ದಾರೆ. ಇದೀಗ ಅನಿತಾ ಕುಟುಂಬ ಸಂಪೂರ್ಣ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅವರನ್ನುಕೋರಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಇರುವುದರಿಂದ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಜಿಲ್ಲಾಧ್ಯಕ್ಷ ಸಂದೇಶ್, ರಾಜ್ಯಾಧ್ಯಕ್ಷ ಪಿಳ್ಳಪ್ಪಹಾಗೂ ಸದಸ್ಯರು ಶ್ರೀನಿವಾಸಪುರಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಧೈರ್ಯಹೇಳಿದ್ದಾರೆ
Advertisement